ಹೊಸ ಆರ್ಥಿಕ ವರ್ಷದ ಅಂಗವಾಗಿ ಲಕ್ಷ್ಮೀ ಪೂಜೆ

0
module: NormalModule; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 68.0;
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜೀವ ವಿಮಾ ನಿಗಮ ಗದಗ 1ನೇ ಶಾಖೆಯು ತನ್ನ 2025-26ನೇ ಸಾಲಿನ ಆರ್ಥಿಕ ವರ್ಷದ ಹೊಸ ಹಣಕಾಸು ವ್ಯವಹಾರದ ಅಂಗವಾಗಿ ಲಕ್ಷ್ಮೀ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

Advertisement

ಕಾರ್ಯಕ್ರಮವನ್ನು ಶಾಖೆಯ ಮ್ಯಾನೇಜರ್ ಎಚ್.ಎಂ. ಭಜಂತ್ರಿ ಉದ್ಘಾಟಿಸಿ ಮಾತನಾಡಿ, ಎಲ್‌ಐಸಿ ದೇಶದಲ್ಲೇ ಅತಿ ದೊಡ್ಡ ವಿಮಾ ಸಂಸ್ಥೆಯಾಗಿದ್ದು, ಈ ವಿಮಾ ಸಂಸ್ಥೆ ತನ್ನ ಗ್ರಾಹಕರ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ಇದೀಗ ತನ್ನ ಎಲ್ಲಾ ಪಾಲಿಸಿಗಳನ್ನು ಹೊಸದಾಗಿ ನವೀಕರಿಸಿದ್ದು ಗ್ರಾಹಕರು ಹೆಚ್ಚು ಹೆಚ್ಚು ಪಾಲಿಸಿಗಳನ್ನು ತೆಗೆದುಕೊಂಡು ತಮ್ಮ ಜೀವನವನ್ನು ಆರ್ಥಿಕವಾಗಿ ಭದ್ರಪಡಿಸಿಕೊಳ್ಳಬೇಕು ಎಂದು ಹೇಳಿದರು.

ಉಪ ಶಾಖಾಧಿಕಾರಿ ಮಾಹಾಂತೇಶ ಮಾತನಾಡಿ, ಗದಗ 1ನೇ ಶಾಖೆ ಧಾರವಾಡ ವಿಭಾಗ ಮಟ್ಟದಲ್ಲಿ ಉನ್ನತ ಸ್ಥಾನ ಪಡೆದಿದೆ. ಭಾರತೀಯ ಜೀವ ವಿಮಾ ನಿಗಮ ಭಾರತ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಎಲ್ಲಾ ಶೇರುಗಳನ್ನು ಸರ್ಕಾರದ ಜನೋಪಯೋಗಿ ಕಾರ್ಯಗಳಲ್ಲಿ ತೊಡಗಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಮಾ ಪ್ರತಿನಿಧಿ ಯಲ್ಲಪ್ಪ ಎಚ್.ಬಾಬರಿ ದಂಪತಿಗಳ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಚಂದ್ರಕಾಂತ್ ಎಸ್, ಸಿದ್ದಾರ್ಥ್, ಕಾಮತ್, ತಳವಾರ, ಪ್ರಕಾಶ ಅಂಗಡಿ, ಎಸ್.ಲಮಾಣಿ, ಪ್ರಭು ರವದಿ, ಎಂ. ದೊಡ್ಡಮನಿ, ಕುಂಬಾರ ಸೇರಿದಂತೆ ಶಾಖೆಯ ಸಿಬ್ಬಂದಿ ವರ್ಗ ಮತ್ತು ವಿಮಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here