ಲಕ್ಷ್ಮೀನಾರಾಯಣ ಸಹಕಾರಿ ಸಂಘದ ದಿನದರ್ಶಿಕೆ ಬಿಡುಗಡೆಗೊಳಿಸಿದ ಡಾ. ಕೊಟ್ಟೂರೇಶ್ವರ ಶ್ರೀ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಸರಕಾರಿ ಉದ್ಯೋಗವೇ ಬೇಕು ಎಂದು ನಿರುದ್ಯೋಗಿಗಳಾಗಿರದೇ ಸೌಹಾರ್ದ ಸಹಕಾರಿ ಸಂಘವನ್ನು ಸ್ಥಾಪಿಸಿ ಉದ್ಯೋಗವನ್ನು ಕಂಡುಕೊಂಡ ಯುವಕರ ಕಾರ್ಯ ಶ್ಲಾಘನೀಯ ಎಂದು ಹರ್ಲಾಪೂರ ಕೊಟ್ಟೂರೇಶ್ವರ ಮಠದ ಡಾ. ಕೊಟ್ಟೂರೇಶ್ವರ ಸ್ವಾಮಿಗಳು ಅಭಿಪ್ರಾಯಪಟ್ಟರು.

Advertisement

ಇಲ್ಲಿಯ ಲಕ್ಷ್ಮೀ ನಾರಾಯಣ ಪತ್ತಿನ ಸೌಹಾರ್ದ ಸಹಕಾರಿ ಸಂಘವು ಹೊರ ತಂದ 2025ರ ದಿನ ದರ್ಶಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಸಂಘವನ್ನು ರಚನೆ ಮಾಡಿದವರು ಯುವಕರೇ ಇದ್ದು, ನಾಲ್ಕಾರು ಯುವಕರಿಗೆ ಉದ್ಯೋಗವನ್ನು ನೀಡಿದ್ದು ಮೆಚ್ಚಲೇಬೇಕಾಗಿದೆ. ಈ ದಿಸೆಯಲ್ಲಿ ಗ್ರಾಮಸ್ಥರು ತಾವು ದುಡಿದ ಹಣವನ್ನು ದುಶ್ಚಟಕ್ಕೆ ವಿನಿಯೋಗಿಸದೇ ಕೂಡಿಟ್ಟ ಹಣವನ್ನು ಇಂತಹ ಸಂಘದಲ್ಲಿ ಠೇವಣಿ ಇಟ್ಟು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಲಿಂಗ ಪೂಜೆ ಮಾಡಿದ ಸ್ವಾಮಿಗಳ ಕೈ ಎಷ್ಟು ಪವಿತ್ರವೋ ಹಾಗೆಯೇ ನ್ಯಾಯ, ನೀತಿ, ಧರ್ಮದಿಂದ ಈ ಸಂಘವನ್ನು ಮುನ್ನಡೆಸಿಕೊಂಡು ಪವಿತ್ರವಾಗಬೇಕು. ಸಾಲ ಕೊಡುವವರು ಮತ್ತು ತೆಗೆದುಕೊಳ್ಳುವವರು ಜವಾಬ್ದಾರಿಯುತವಾಗಿ ವ್ಯವಹರಿಸಬೇಕು ಎಂದು ಸಲಹೆ ನೀಡಿದರು.

ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಸಂಘವು ಸಾಲವನ್ನು ನೀಡುವಲ್ಲಿ ಕಾನೂನಿನ ಅಡಿಯಲ್ಲಿ ಎಲ್ಲರನ್ನು ಸಮಾನವಾಗಿ ಕಂಡು ಅಭಿವೃದ್ಧಿಯತ್ತ ದಾಪುಗಾಲು ಹಾಕಲಿ ಎಂದು ಹಾರೈಸಿದರು.

ನಿವೃತ್ತ ಯೋಧ ದತ್ತಣ್ಣ ಜೋಶಿ ಮಾತನಾಡಿ, ಸರ್ವರ ಪಾಲುಗಾರಿಕೆಯಿಂದ ಈ ಸಂಘವು ರಚನೆಯಾಗಿದ್ದು, ಇಲ್ಲಿ ಕೇವಲ ಹಣಕಾಸು ವ್ಯವಹಾರಕ್ಕಿಂತ ಆತ್ಮಿಯತೆ ಮತ್ತು ಸದ್ಬಳಕೆಗೆ ಪ್ರಾಮುಖ್ಯತೆ ಇರಲಿ. ಬಂದ ಲಾಭದಲ್ಲಿ ಸಾಮಾಜಿಕ ಸೇವೆಗೂ ಸಹ ವಿನಿಯೋಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಉಚಿತವಾಗಿ ನೂತನ ವರ್ಷದ ದಿನ ದರ್ಶಿಕೆಯನ್ನು ಹೊರ ತಂದಿದ್ದು ಸಂತಸ ತಂದಿದೆ. ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ದಿನದರ್ಶಿಕೆಯು ನಮ್ಮ ಭಾರತೀಯ ಸಂಸ್ಕೃತಿಗೆ ಅತ್ಯವಶ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಸವರಾಜ ಮುಳ್ಳಾಳ ಮಾತನಾಡಿ, ಗ್ರಾಮದ ಎಲ್ಲರೂ ಸಹಾಯ, ಸಹಕಾರ, ಮಾರ್ಗದರ್ಶನ ನೀಡಿ ಸಂಘವನ್ನು ಅಭಿವೃದ್ಧಿಪಡಿಸಬೇಕು ಎಂದು ವಿನಂತಿಸಿಕೊAಡರು.

ಅಲ್ಲಮಪ್ರಭುದೇವರ ಮಠದ ಸಿದ್ದಲಿಂಗೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಉಪವಿಭಾಗಾಧಿಕಾರಿ ಎಂ.ಗAಗಪ್ಪ, ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎನ್. ಇನಾಮದಾರ. ಗ್ರಾ.ಪಂ ಸದಸ್ಯರಾದ ಸಿದ್ದು ಮುಳಗುಂದ, ಮಹಾಂತೇಶ ಕಮತರ, ವೀರಯ್ಯ ನಡುವಿನಮಠ, ಚನ್ನಪ್ಪ ಹುಬ್ಬಳ್ಳಿ, ಕಳಕಪ್ಪ ಟೆಂಗಿನಕಾಯಿ, ನಿಂಗಪ್ಪ ಗುಂಜಳ, ಐ.ಎಸ್. ಮಟ್ಟಿ, ಪಿ.ಡಿ.ಒ ರಾಜಕುಮಾರ ಭಜಂತ್ರಿ, ಗ್ರಾ.ಪಂ ಕಾರ್ಯದರ್ಶಿ ಪ್ರದೀಪ ನವಲಗುಂದ, ತುಕಾರಾಮ ಹುಲಗಣ್ಣವರ, ವೀರಣ್ಣ ಅರಹುಣಶಿ, ವಿನಾಯಕ ಡಿಗ್ಗಾವಿ ಉಪಸ್ಥಿತರಿದ್ದರು.

ಪ್ರವಿಣ ಕಲಾಲ ಸ್ವಾಗತಿಸಿದರು. ವಿರುಪಾಕ್ಷಪ್ಪ ಬೆಟಗೇರಿ ನಿರೂಪಿಸಿದರು. ಬಸವರಾಜ ಕವಲೂರ ವಂದಿಸಿದರು.

ಯುವಕರೇ ಹುಟ್ಟು ಹಾಕಿರುವ ಸಹಕಾರ ಸಂಘಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರದಿಂದ ದೊರೆಯುವ ಸಹಾಯ-ಸೌಲಭ್ಯವನ್ನು ಒದಗಿಸಿ ಅಭಿವೃದ್ಧಿಯಾಗಲು ಪ್ರೋತ್ಸಾಹಿಸಲಾಗುವುದು

– ಗಂಗಪ್ಪ ಎಂ.

ಉಪವಿಭಾಗಾಧಿಕಾರಿಗಳು, ಗದಗ.


Spread the love

LEAVE A REPLY

Please enter your comment!
Please enter your name here