ಲಂಬಾಣಿಗರು ನಿಜವಾದ ಕಾಯಕಯೋಗಿಗಳು

0
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಬಂಜಾರ ಜನಾಂಗವು ವಿಶಿಷ್ಟ ಭಾಷೆ ಹಾಗೂ ಸಂಸ್ಕೃತಿಯಿಂದ ಗುರುತಿಸಿಕೊಂಡಿದೆ. ಸದಾ ಒಳಿತು ಬಯಸುವ ಬಂಜಾರ ಸಮುದಾಯದ ಚಿಂತನೆ ಅನುಕರಣೀಯವಾಗಿದೆ. ಈ ಸಮುದಾಯ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

Advertisement

ಗಜೇಂದ್ರಗಡ ನಗರದ ಲಂಬಾಣಿ ತಾಂಡಾದಲ್ಲಿ ನಡೆದ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿಯಲ್ಲಿ ಪಾಲ್ಗೊಂಡು, ಸಮುದಾಯ ಭವನದ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.

ಇಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನಕ್ಕೆ ಅಂದಾಜು 40 ಲಕ್ಷ ರೂಪಾಯಿ ಖರ್ಚಾಗಲಿದ್ದು, ಸದ್ಯ ಶಾಸಕರ ನಿಧಿಯಿಂದ 10 ಲಕ್ಷ ರೂಪಾಯಿ ನೀಡಲಾಗಿದೆ. ಉಳಿದ ಅನುದಾನವನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಅನೇಕ ತಲೆಮಾರುಗಳಿಂದ ಗುಡ್ಡದ ಪ್ರದೇಶಗಳಲ್ಲಿ ಕೃಷಿ ಮಾಡಿ ಜೀವನ ಸಾಗಿಸುತ್ತಿರುವ ಬಂಜಾರ ಜನಾಂದವರಿಗೆ ಹಕ್ಕುಪತ್ರ ಕೊಡಿಸಲು ಶ್ರಮಿಸಲಾಗುವುದು. ಅಷ್ಟೇ ಅಲ್ಲದೆ ಎಷ್ಟೋ ಜನ ಅರ್ಜಿ ಹಾಕದೆ ಇರುವ ಬಗ್ಗೆ ತಿಳಿದಿದೆ. ಬಗರ್ ಹಕ್ಕುಂ ಅರ್ಜಿ ಹಾಕಲು ಮತ್ತೆ ಅವಕಾಶ ಮಾಡಿಕೊಡುವಂತೆ ಪ್ರಯತ್ನಿಸಲಾಗುವುದು ಎಂದರು.

ಗಜೇಂದ್ರಗಡ ತಾಂಡಾದ ಹಿರಿಯರು ಸೇರಿ ಸಮಿತಿಯಿಂದ ಬಡವರಿಗಾಗಿ ಮನೆ ಕಟ್ಟಿಸಿಕೊಳ್ಳಲು ಹೊಲ ಹಿಡಿದ ಜಾಗದಲ್ಲಿ ಹಂತ ಹಂತವಾಗಿ ಸರ್ಕಾರದಿಂದ 240 ಮನೆಗಳನ್ನು ನಿರ್ಮಾಣ ಮಾಡಿಕೊಡಲು ಪ್ರಯತ್ನಿಸಲಾಗುವುದ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸೇವಾಲಾಲ್ ಮಹಾರಾಜರ ಜೀವನ ಚರಿತ್ರೆ, ಧರ್ಮ ಬೋಧನೆ ಕಾರ್ಯಕ್ರಮಗಳು ನಡೆದವು. ವಿಶ್ವ ಶಾಂತಿಗಾಗಿ ಭೋಗ್ (ಯಜ್ಞ) ಸಮರ್ಪಣೆ ಮಾಡಲಾಯಿತು. ನಂತರ ಸರ್ವರ ಏಳಿಗೆಗಾಗಿ ಬಂಜಾರ ಭಾಷೆಯಲ್ಲಿ ವಿಂತಿ (ಪ್ರಾರ್ಥನೆ) ಮಾಡಲಾಯಿತು.

ಹಿರಿಯರಾದ ಲಾಲಪ್ಪ ರಾಠೋಡ, ರಾಮಚಂದ್ರಪ್ಪ ಮಾಳೋತ್ತರ, ಪ್ರಶಾಂತ ರಾಠೋಡ, ಗಣೇಶ ಮಾಳೋತ್ತರ, ಉಮೇಶ ರಾಠೋಡ, ಪರಶುರಾಮ ಗುಗಲೋತ್ತರ, ಈಶಪ್ಪ ರಾಠೋಡ, ಯಮನಪ್ಪ ನಾಯಕ, ಸುರೇಶ ನಾಯಕ, ಮನ್ನಾ ನಾಯಕ, ಗೋವಿಂದಪ್ಪ ಕಾರಬಾರಿ, ದುರಗಪ್ಪ ಕಾರಬಾರಿ, ಚಂಬಣ್ಣ ಚವಡಿ, ಪಲ್ಲೇದ, ಶಂಕ್ರಪ್ಪ ಮಾಳೋತ್ತರ, ನೂರಪ್ಪ ರಾಠೋಡ, ವಿಠ್ಠಲ ರಾಠೋಡ, ಶಿವು ಚವಾಣ, ಶಂಕ್ರಪ್ಪ ಮಾಳೋತ್ತರ, ಪೀರಪ್ಪ ರಾಠೋಡ, ಪುರಸಭೆ ಅಧ್ಯಕ್ಷ ಸುಭಾಷ್ ಮ್ಯಾಗೇರಿ, ಪುರಸಭೆ ಸದಸ್ಯರಾದ ರೂಪೇಶ ರಾಠೋಡ, ರಾಜು ಸಾಂಗ್ಲಿಕರ, ಮುರ್ತುಜಾ ಡಾಲಾಯತ ಮುಂತಾದವರಿದ್ದರು.

ಕಟ್ಟಿಗೆ ಹೊತ್ತು, ಅರಣ್ಯಗಳಲ್ಲಿ, ಕೃಷಿ ಜಮೀನುಗಳಲ್ಲಿ ದುಡಿಯುವ ಬುಡಕಟ್ಟು ಜನಾಂಗದ ಬಂಜಾರರು ಶ್ರಮಿಕರಾಗಿದ್ದಾರೆ. ಯಾವಾಗಲೂ ದುಡಿಮೆಗೆ ಹೆಚ್ಚಿನ ಮಹತ್ವ ನೀಡುವ ಕಾಯಕಯೋಗಿಗಳು ಮಕ್ಕಳ ಶಿಕ್ಷಣಕ್ಕೂ ಮಹತ್ವ ನೀಡಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸೇವಾಲಾಲ್ ಮಹಾರಾಜರು ತಮ್ಮ ಜೀವನ ಅನುಭವದ ಮೂಲಕ ಗೌರವಯುತ ಮಾತುಗಳಲ್ಲಿ ಸತ್ಯ, ಅಹಿಂಸಾ, ಸೇವಾ ಮಾರ್ಗಗಳನ್ನು ಪ್ರಕಾಶಗೊಳಿಸಿದರು. ಅಂತಹ ತತ್ವಾದರ್ಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.


Spread the love

LEAVE A REPLY

Please enter your comment!
Please enter your name here