ದೊಡ್ಡಬಳ್ಳಾಪುರ:- ಜಮೀನು ವ್ಯಾಜ್ಯ ಹಿನ್ನೆಲೆ ವಕೀಲನ ಮೇಲೆ ಗುಂಪಿನಿಂದ ಹಲ್ಲೆ ನಡೆದಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ಜರುಗಿದೆ.
ಜಮೀನಿಗೆ ಕಾಂಪೌಂಡ್ ಹಾಕಲು ಹೋಗಿದ್ದ ವೇಳೆ ವಕೀಲ ಪ್ರತಾಪ್ ಮೇಲೆ ಅದೇ ಗ್ರಾಮದ ವಕೀಲನ ಕುಟುಂಬಸ್ಥರಿಂದ ಈ ಹಲ್ಲೆ ನಡೆದಿದೆ. ಮುಖಕ್ಕೆ ಖಾರದ ಪುಡಿ ಎರಚಿ ದೊಣ್ಣೆ ಮತ್ತು ರಾಡ್ ನಿಂದ ರಕ್ತ ಬರುವಂತೆ ಹಲ್ಲೆ ನಡೆದಿದೆ.
ಸ್ಥಳದಲ್ಲಿ ಪೊಲೀಸರು ಇದ್ದರೂ ಕ್ಯಾರೆ ಎನ್ನದೆ ಗುಂಪು ಹಲ್ಲೆ ನಡೆಸಿದೆ. ಜಗಳ ಬಿಡಿಸಲು ಬಂದ ವ್ಯಕ್ತಿಗಳ ಮೇಲೂ ಗುಂಪು ಹಲ್ಲೆ ನಡೆಸಿ ದರ್ಪ ತೋರಿದೆ. ಹಲ್ಲೆ ಸಂಬಂಧ ಒಟ್ಟು 19 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.



