ವಿಜಯಸಾಕ್ಷಿ ಸುದ್ದಿ, ಮುಂಡರಗಿ : ತಾಲೂಕಿನ ಲಾರ್ವಾ ಸಮೀಕ್ಷೆಗೆ ಆರೋಗ್ಯ ಸುರಕ್ಷಣಾ, ನಿರೀಕ್ಷಣಾ ಅಧಿಕಾರಿಗಳನ್ನೊಳಗೊಂಡತೆ 36 ವಿವಿಧ ತಂಡಗಳನ್ನು ರಚಿಸಲಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ ಅವರು ಹೇಳಿದರು.
ಮುಂಡರಗಿ ತಾಲೂಕಾ ಆಸ್ಪತ್ರೆಯಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು, ತಾಲೂಕಾ ಆಡಳಿತ, ತಾಲೂಕು ಪಂಚಾಯತ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ತಾಲೂಕಾ ಲಾರ್ವಾ ಸಮಿಕ್ಷೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಲಾರ್ವಾ ನಿರ್ವಾಹರಣ ದಿನದ ಅಂಗವಾಗಿ ಪ್ರತಿ ಶುಕ್ರವಾರ ನಗರದಲ್ಲಿ ಲಾರ್ವಾ ಸರ್ವೆಗಳನ್ನು ಕೈಗೊಳ್ಳಲಿದ್ದು, ಮುಂಡರಗಿ ನಗರ ಪ್ರದೇಶದಲ್ಲಿ ಲಾರ್ವಾ ಸರ್ವೆ ಮಾಡಲು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿ ಒಟ್ಟು 36 ತಂಡಗಳನ್ನು ರಚಿಸಲಾಗಿದೆ.
ಅದರ ಮೇಲ್ವಿಚಾರಣೆ ಮಾಡಲು ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು, ತಾಲೂಕಾ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ತಾಲೂಕಾ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಮುಂಡರಗಿ ನಗರದ ಸಿ.ಹೆಚ್.ಓ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಂಜಳಾ ಸಜ್ಜನರ, ಜಯಲಕ್ಷ್ಮಿ ಕೊಳ್ಳರೂ, ಕೆ.ಎಸ್. ಚೌಟಗಿ, ಕೆ.ವಿ. ಬಡಿಗೇರ, ಕೆ.ಪಿ. ಗಂಭಿರ, ಎಮ್.ಎಫ್. ಕಲಕಂಬಿ, ಶಂಕರಲಿಂಗ ಕೋರಿ, ಎಮ್.ಎ. ಡಾಲಾಯತ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.