ಸಮಾಜ ಸೇವೆಯ ಮೂಲಕ ಕೊನೆಯ ದಿನಗಳನ್ನು ಖುಷಿಯಾಗಿ ಕಳೆದರು: ಶೋಭಾ ಕರಂದ್ಲಾಜೆ

0
Spread the love

ಉಡುಪಿ: ಹಿರಿಯ ನಟಿ ಲೀಲಾವತಿ ಅಗಲಿದ್ದಾರೆ. ಬಣ್ಣದ ಲೋಕವೇ ಹಾಗೆ. ನಮ್ಮ ಜೀವನವೇ ಹಾಗೆ. ಲೀಲಾವತಿ ಕೊನೆಯ ದಿನದವರೆಗೂ ಕಷ್ಟದ ಜೀವನ ಸಾಗಿಸಿದರು. ದುಃಖದಲ್ಲಿ ಎಲ್ಲಾ ಅಪಮಾನಗಳನ್ನು ಸಹಿಸಿಕೊಂಡು ಜೀವಿಸಿದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೀಲಾವತಿ ದುಃಖವನ್ನು ನುಂಗಿ ಬದುಕಿದ ಕಲಾವಿದೆ. ಸಮಾಜಕ್ಕೆ ಏನಾದರೂ ಮಾಡಬೇಕೆಂದು ಬೆಂಗಳೂರಿನಿಂದ ದೂರ ಹೋಗಿ ನೆಲಮಂಗಲದಲ್ಲಿ ನೆಲೆಸಿದರು. ಸಮಾಜ ಸೇವೆಯ ಮೂಲಕ ಕೊನೆಯ ದಿನಗಳನ್ನು ಖುಷಿಯಾಗಿ ಕಳೆದರು. ಬಣ್ಣದ ಬದುಕು ಕಷ್ಟ. ಲೀಲಾವತಿಯವರ ಬದುಕು ಇನ್ನೂ ಕಷ್ಟ ಎಂದರು.

ಲೀಲಾವತಿ ನಮ್ಮೂರಿನವರು. ನನಗೆ ಸಿಕ್ಕಾಗೆಲ್ಲ ತುಳುವಿನಲ್ಲೇ ಮಾತನಾಡುತ್ತಿದ್ದರು. ಬೆಂಗಳೂರಿನಲ್ಲಿ  ನೆಲೆಸಿ ಚಲನಚಿತ್ರರಂಗಕ್ಕೆ ಅಪಾರ ಸೇವೆ ನೀಡಿದ್ದಾರೆ. ಸಮಾಜ ಸೇವೆ, ಪ್ರಾಣಿಗಳ ಸೇವೆಯ ಮೂಲಕ ಪೂರ್ಣವಾಗಿ ತೊಡಗಿಸಿಕೊಂಡಿದ್ದರು. ವಿನೋದ್ ರಾಜ್, ಕುಟುಂಬ ಬಂಧು ಬಳಗಕ್ಕೆ ನೋವು ಸಹಿಸುವ ಶಕ್ತಿ ಕೊಡಲಿ ಎಂದು ಸಂತಾಪ ಸೂಚಿಸಿದರು.


Spread the love

LEAVE A REPLY

Please enter your comment!
Please enter your name here