⇔ಮೈಸೂರು: ಕನ್ನಡ ಚಿತ್ರರಂಗದ ಖ್ಯಾತ ನಟ ದಿವಂಗತ ಕೆ.ಎಸ್. ಅಶ್ವಥ್ ಅವರ ಪತ್ನಿ ಶಾರದಾ ಅಶ್ವಥ್ (96) ಅವರು ವಯೋಸಹಜ ಅನಾರೋಗ್ಯದಿಂದ ಇಂದು ವಿಧಿವಶರಾದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಅಂತಿಮ ಶ್ವಾಸ ತಳೆದರು.
ಶಾರದಾ ಅಶ್ವಥ್ ಅವರು ಖ್ಯಾತ ನಟ ಶಂಕರ್ ಅಶ್ವಥ್ ಅವರ ತಾಯಿಯಾಗಿದ್ದಾರೆ. ತಾಯಿಯ ಅಗಲಿಕೆಯಿಂದ ಶಂಕರ್ ಅಶ್ವಥ್ ಸೇರಿದಂತೆ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ಇನ್ನೂ ತಾಯಿಯ ಅಗಲಿಕೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಶಂಕರ್ ಅಶ್ವಥ್, ತಂದೆಯೂ ಇಲ್ಲ. ಈಗ ನೀನೂ ಹೋಗಿ ನನ್ನನ್ನು ಸಂಪೂರ್ಣ ಅನಾಥನಾಗಿ ಮಾಡಿಬಿಟ್ಟೆ ಎಂದು ನೋವು ತೋಡಿಕೊಂಡಿದ್ದಾರೆ.
ಕುಟುಂಬ ಮೂಲಗಳ ಪ್ರಕಾರ, ಇಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಹರಿಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.



