ಬೆಂಗಳೂರಲ್ಲಿ ತಡರಾತ್ರಿ ಅಬ್ಬರದ ಮಳೆ: ಹಲವು ಏರಿಯಾಗಳಲ್ಲಿ ಸಾಕಷ್ಟು ಅವಾಂತರ!

0
Spread the love

ಬೆಂಗಳೂರು:ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ಮಳೆರಾಯ ಅಬ್ಬರಿಸಿ ಬೊಬ್ಹಿರಿದ್ದಾನೆ. ಮಳೆಯ ಆರ್ಭಟದಿಂದ ಹಲವು ರಸ್ತೆಗಳು ಜಲಾವೃತವಾಗಿದೆ. ಮೆಜೆಸ್ಟಿಕ್​​, ಓಕಳಿಪುರ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ಕೋರಮಂಗಲ,

Advertisement

ವಿಧಾನಸೌಧ, ಶಿವಾಜಿನಗರ, ಕಾರ್ಪೊರೇಷನ್​​ ಸರ್ಕಲ್, ಟೌನ್​ಹಾಲ್, ಕೆ.ಆರ್​.ಮಾರ್ಕೆಟ್​​, ತ್ಯಾಗರಾಜನಗರ, ಜಯನಗರ, ಹನುಮಂತನಗರ, ಶ್ರೀನಗರ, ಮೈಸೂರು ರಸ್ತೆ, ನಾಯಂಡಹಳ್ಳಿ, ಮಾಗಡಿ ರಸ್ತೆ, ವಿಜಯನಗರ, ಕೆಂಗೇರಿ, ಶಿವಾನಂದ ಸರ್ಕಲ್, ಮೇಖ್ರಿ ಸರ್ಕಲ್​​, ಹೆಬ್ಬಾಳ, ಯಲಹಂಕ, ಕೆ.ಆರ್​.ಪುರಂ ಸೇರಿದಂತೆ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು ರಸ್ತೆಗಳು ಜಲಾವೃತಗೊಂಡಿವೆ.

ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ನಿದ್ದೆಗೆಟ್ಟಿದ್ದಾರೆ. ಒಕಳಿಪುರಂನ ಅಂಡರ್​ಪಾಸ್​ಗೆ ನೀರು ನುಗ್ಗಿ, ವಾಹನ ಸವಾರರು ತಡರಾತ್ರಿ ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ನೀರು ನಿಂತದ್ದ ರಸ್ತೆಯಲ್ಲಿಯೇ ಆ್ಯಂಬುಲೆನ್ಸ್ ಸಿಲುಕಿಕೊಂಡಿತ್ತು. ಪೇಷಂಟ್ ಇಲ್ಲದಿರೋದ್ರಿಂದ, ನೀರಿನ ಪ್ರಮಾಣ ಕಡಿಮೆ ಆದ್ಮೇಲೆ ಆ್ಯಂಬುಲೆನ್ಸ್ ತೆರಳಿತು. ಒಟ್ಟಿನಲ್ಲಿ ಮಳೆರಾಯನ ಆರ್ಭಟಕ್ಕೆ ಸಿಲಿಕಾನ್ ಸಿಟಿ ಮಂದಿ ಅಕ್ಷರಶಃ ನಲುಗಿ ಹೋಗಿದ್ದಾರೆ.


Spread the love

LEAVE A REPLY

Please enter your comment!
Please enter your name here