ಗದಗ: ಹೆಂಡತಿ ಕರೆತರಲು ಹೋಗಿ ಬೈಕ್ ಸಮೇತ ಇಬ್ಬರು ಯುವಕರು ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಬಳಿ ನಡೆದಿದೆ.
ಶಿವಪ್ಪ ಅಶೋಕಪ್ಪ ಅವರಾದಿ (25) ಮಣಿಕಂಠ ಅಶೋಕ ಮಲ್ಲಾಪೂರ (26) ನೀರು ಪಾಲಾದ ಯುವಕರಾಗಿದ್ದು, ಶಿವಪ್ಪ ಅಶೋಕಪ್ಪ ಅವರಾದಿ ಶವ ಪತ್ತೆಯಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರಿಂದ ಮಣಿಕಂಠನಿಗಾಗಿ ಶೋಧ ನಡೆಯುತ್ತಿದೆ.
ನಿನ್ನೆ ರಾತ್ರಿ ಹೆಂಡತಿ ಕರೆತರಲು ಹುಣಸಿಕಟ್ಟಿಯಿಂದ ನರಗುಂದಕ್ಕೆ ಮಣಿಕಂಠ ಹಾಗೂ ಗೆಳೆಯ ಹೋಗಿದ್ದರು.
ಗದಗ ಜಿಲ್ಲೆಯ ಹಲವಡೆ ರಾತ್ರಿ ಭಾರಿ ಮಳೆ ಹಿನ್ನೆಲೆ ಮಾರ್ಗ ಮಧ್ಯೆ ತುಂಬಿ ಹರಿಯುತ್ತಿದ್ದ ಒಡ್ಡಿ ಹಳ್ಳದಲ್ಲಿ ಕೊಚ್ಚಿ ಹೋಗಿ ಅವಘಡ ಸಂಭವಿಸಿದೆ.
ಮಣಿಕಂಠನ ಹೆಂಡತಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ರಾತ್ರಿ ಧಾರಾಕಾರ ಮಳೆಯಾಗುತ್ತಿದ್ದರಿಂದ ಶಿಕ್ಷಕಿಗೆ ಊರಿಗೆ ಬರೋದಕ್ಕೆ ಆಗಿರಲಿಲ್ಲ, ಹೀಗಾಗಿ ರಾತ್ರಿ 8 ಗಂಟೆ ಸುಮಾರಿಗೆ ಬೈಕ್ ಏರಿ ಹೆಂಡತಿ ಕರೆತರಲು ಹೋಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ವೇಳೆ ಈ ದುರ್ಘಟನೆ ನಡೆಡಿದೆ. ಇನ್ನೂ ನರಗುಂದ ಸಿಪಿಐ, ಪೊಲೀಸರು ಸ್ಥಳದಲ್ಲೇ ಠಿಕಾಣಿ ಹೂಡಿದ್ದು, ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.