ವಿಜಯಸಾಕ್ಷಿ ಸುದ್ದಿ, ಗದಗ: ಡಾ. ಬಿ.ಆರ್. ಅಂಬೇಡ್ಕರರ 68ನೇ ಮಹಾಪರಿನಿರ್ವಾಣದ ನಿಮಿತ್ತ ಡಾ. ಬಿ.ಆರ್. ಅಂಬೇಡ್ಕರ ಜ್ಞಾನ ಪ್ರಸಾರ ಕೇಂದ್ರ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಗದಗ-ಬೆಟಗೇರಿ ನಗರಸಭೆ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚೈತ್ಯಭೂಮಿ (ಮುಂಬೈ-ದಾದರ್) ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ವೆಂಕಟೇಶ ಬೇಲೂರ ಮಾತನಾಡಿ, ನಮ್ಮ ಸಮಿತಿ 28 ವರ್ಷಗಳಿಂದ ಸತತವಾಗಿ ಸೇವೆ ಮಾಡುತ್ತ, ಸಕಲ ದಲಿತ ಬಂಧುಗಳಿಗೆ ಸದರಿ ಸಮಿತಿ ಚೈತ್ಯಭೂಮಿ (ಮುಂಬೈ-ದಾದರ್) ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಲ್ಲಪ್ಪ ತೇರದಾಳ, ಶ್ರೀನಿವಾಸ ಭಂಡಾರಿ, ದಾವಲಸಾಬ ಮುಳಗುಂದ, ಮಹೇಶ ದಾಸರ, ತಿಮ್ಮಣ್ಣ ಡೋಣಿ, ಹನಮಂತಸಾ ಶಿದ್ಲಿಂಗ, ಮಂಜುನಾಥ ಬಾಗಿ, ಮೈಲಾರಪ್ಪ ಕೊಟೆಪ್ಪನವರು, ಮಂಜುನಾಥ ಗುರ್ಲಹೊಸೂರ, ಶಿವಾಜಿ ಚವ್ಹಾಣ, ಸಹದೇವ ಕೋಟಿ, ಮಣಿಕಂಠ ಭಂಡಾರಿ, ಮಂಜುನಾಥ ಶಾಂತಗೇರಿ, ಮಲ್ಲಯ್ಯ ಜಂಗಳಿಮಠ, ಅನಿಲ ಖಟವಟೆ ಮುಂತಾದವರು ಭಾಗವಹಿಸಿದ್ದರು.