ವಿಜಯಸಾಕ್ಷಿ ಸುದ್ದಿ, ಮುಳಗುಂದ : ಸ್ಥಳೀಯ ಅಂಜುಮನ್-ಏ-ಇಸ್ಲಾಂ ಸಂಸ್ಥೆ ಮುಳಗುಂದ ಪಟ್ಟಣದ ಕಮಿಟಿಯ ಚುನಾವಣೆ ಅಂಗವಾಗಿ ಖಿದ್ಮತ್-ಎ-ಮಿಲ್ಲತ್ ಗ್ರೂಪ್ ವತಿಯಿಂದ ಮಹತ್ವದ ಪಂಚ ಗ್ಯಾರಂಟಿ ಯೋಜನೆಗಳನ್ನು ಪಟ್ಟಣದ ಹಿರಿಯರು ಹಾಗೂ ಮುಖಂಡರು ಬಿಡುಗಡೆ ಮಾಡಿದರು.
ಪಂಚ ಗ್ಯಾರಂಟಿ ಯೋಜನೆಗಳಾದ ಮುಸ್ಲಿಂ ಸಮುದಾಯದ ಜನಗಣತಿ, ಅಂಜುಮನ್ ಬೈಲಾ ತಿದ್ದುಪಡಿ, ಉರ್ದು ಸರಕಾರಿ ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆ, ಜಶ್ನೆ-ಏ-ಈದ ಮಿಲಾದುನ್ನಬಿ ಸಂಭ್ರಮಾಚರಣೆ, ಬಡ ಮಕ್ಕಳ ಶೈಕ್ಷಣಿಕ ದತ್ತು ಮತ್ತು ಅತಿ ಬಡ ಹೆಣ್ಣು ಮಕ್ಕಳ ಮದುವೆ ಯೋಜನೆಗಳು ಮುಸ್ಲಿಂ ಸಮುದಾಯದ ಜನರ ಅಭಿವೃದ್ಧಿ ಹಾಗೂ ಸಮಾಜದ ಅಭಿವೃದ್ಧಿಯ ಕುರಿತಂತೆ ಮಾಡಲಾಗಿದ್ದು, ಈ ಯೋಜನೆಗಳನ್ನು ಜಾರಿಗೆ ತರುವುದು ನಮ್ಮ ಜವಾಬ್ದಾರಿಯಾಗಿದೆ. ಆದ್ದರಿಂದ ತಮ್ಮ ಮತಗಳನ್ನು ನಮಗೆ ನೀಡಿ ಸಂಪೂರ್ಣ ಬಹುಮತದಿಂದ ಆರಿಸಿ ತರಬೇಕೆಂದು ಮತದಾರ ಬಾಂಧವರಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ವಿಜಯಕುಮಾರ ನೀಲಗುಂದ, ಅಶೋಕ ಹುಣಸಿಮರದ, ಪಕ್ರುಸಾಬ ಇಮಾಮಸಾಬ, ಅಬ್ದುಲಖಾದರ ದುರ್ಗಿಗುಡಿ, ಎಚ್.ಎಂ, ನದ್ದೀಮುಲ್ಲಾ ಇಮಾಮಸಾಬ ಖವಾಸ, ಇಬ್ರಾಹಿಂಸಾಬ ಹಣಗಿ, ಮುನ್ನಾ ದುರ್ಗಿಗುಡಿ, ಮುಸ್ತಾಕ ಅಕ್ಕಿ, ಜಿಲಾನಿ ಮಾಬುಸಬಾನಿ, ಮುಜಾವರ ಚಾಂದಸಾಬ ಅಕ್ಕಿ, ಶರೀಫಸಾಬ ಒಚಿಟಿ, ಇಮಾಮಹುಸೇನ ಮುಜಾವರ, ಡಿ.ಡಿ. ಮುಜಾವರ, ಹಸನಸಾಬ ಹೊಸೂರ ಹಾಗೂ ವಿವಿಧ ಜಮಾತಿನ ಗುರು-ಹಿರಿಯರು ಭಾಗವಹಿಸಿದ್ದರು.