ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಮಹಾನ್ ವ್ಯಕ್ತಿ ಮತ್ತು ಸಂಸ್ಥೆ ಪರಿಚಯಿಸಲು `ಶಾಶ್ವತ ಚಿತ್ರಾತ್ಮಕ ಮುದ್ರೆ’ ವಿಶೇಷ ಮುದ್ರೆಯನ್ನು ಬಿಡುಗಡೆ ಮಾಡುವುದರಿಂದ ಸಾಧ್ಯವಾಗಲಿದೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಜಯದೇವ ಕಡಗಿ ಅಭಿಪ್ರಾಯಪಟ್ಟರು.
ಭಾರತೀಯ ಅಂಚೆ ಇಲಾಖೆಯು ಗದುಗಿನ ಶ್ರೀ ವೀರನಾರಯಣ ದೇವಾಲಯದಲ್ಲಿ ಮಂಗಳವಾರ ಕರ್ನಾಟಕ ಸಂಭ್ರಮ-50 ಮಹೋತ್ಸವ ಹಿನ್ನೆಲೆಯಲ್ಲಿ ಕುಮಾರವ್ಯಾಸ ಹೆಸರಿನಲ್ಲಿ `ಶಾಶ್ವತ ಚಿತ್ರಾತ್ಮಕ ಮುದ್ರೆ’ ವಿಶೇಷ ಮುದ್ರೆಯ ಲೋಕಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.
ವೀರನಾರಾಯಣ ದೇವಸ್ಥಾನ ಕಮಿಟಿ ಅಧ್ಯಕ್ಷ ಡಾ. ಕುಶಾಲ ಗೋಡ್ಕಂಡಿ ಮಾತನಾಡಿ, ಕರ್ನಾಟಕ ಕಥಾ ಮಂಜರಿಯನ್ನು ಕುಮಾರವ್ಯಾಸರು ಗದುಗಿನ ವೀರನಾರಾಯಣ ಸನ್ನಿಧಿಯಲ್ಲಿ ರಚಿಸಿರುವ ಮತ್ತು ನಮ್ಮ ನಾಡಿಗೆ `ಕರ್ನಾಟಕ’ ಎಂದು ನಾಮಕರಣ ಮಾಡಲು ಮೂಲ ಪ್ರೇರಣೆ ನೀಡಿದ ಕುಮಾರವ್ಯಾಸರಿಗೆ ಶ್ರೇಯಸ್ಸು ಸಲ್ಲುತ್ತದೆ. ಕುಮಾರವ್ಯಾಸರ ಗಮಕ ಸಾಹಿತ್ಯದ ಕೊಡುಗೆ ನಮಗೆ ಹೆಮ್ಮೆಯ ವಿಷಯವಾಗಿತ್ತು. ಇದೀಗ ಈ ಸಾಲಿಗೆ ಕುಮಾರವ್ಯಾಸರ `ಶಾಶ್ವತ ಚಿತ್ರಾತ್ಮಕ ಮುದ್ರೆ’ ವಿಶೇಷ ಮುದ್ರೆಯ ಲೋಕಾರ್ಪಣೆ ನಾಡಿನ ಜನರಿಗೆ ಸಂತಸ ತಂದಿದೆ ಎಂದರು.
ನಾಡಿನ ಎಲ್ಲೆಡೆ ಪ್ರಖ್ಯಾತಿ ಪಡೆದುಕೊಂಡಿರುವ ಗದುಗಿನ ವೀರನಾರಾಯಣ ಮತ್ತು ಕುಮಾರವ್ಯಾಸರ ಕೀರ್ತಿ ಬೆಳೆಯಲು ಪ್ರಮುಖ ಅಂಶಗಳನ್ನು ಈ ಮುದ್ರೆ ಹೊಂದಿದೆ. ಇಂತಹ ಅಂಚೆಚೀಟಿ ಅಂತಾರಾಷ್ಟ್ರೀಯ ಮಟ್ಟದ ಪ್ರಚಾರ ದೊರಕಲು ಸಹಕಾರಿಯಾಗಿದೆ ಎಂದರು.
ಅಂಚೆ ಚೀಟಿ ಸಂಗ್ರಹಕಾರರಾದ ಎ.ಬೇಲೇರಿ, ಶ್ರೀನಿವಾಸ ದ್ವಾರಪಾಲಕ ಮಾತನಾಡಿದರು. ಅಂಚೆ ಚೀಟಿ ಸಂಗ್ರಹಕರರಾದ ಸಯಂ ಬಾಗಮಾರ ಹಾಗೂ ಗದಗ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಶ್ರೀಕಾಂತ ಜಾದವ, ಸುನೀಲಕುಮಾರ ವಿ, ರೋಣ ಉಪ ವಿಭಾಗದ ಅಂಚೆ ಸಹಾಯಕ ನಿರೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ, ಪ್ರಧಾನ ಅಂಚೆ ಪಾಲಕರಾದ ಮಂಜುಳಾ ದೇಗಿನಾಳ, ಉಪ ಅಂಚೆ ಪಾಲಕ ದೊಡ್ಡಪ್ಪ ಇಟಗಿ, ಸಹಾಯಕ ಅಂಚೆ ಪಾಲಕ ಡಿ.ಜಿ. ಮ್ಯಾಗೇರಿ ಹಾಗೂ ಅಂಚೆ ಇಲಾಖೆ ಮಾರುಕಟ್ಟೆ ವ್ಯವಸ್ಥಾಪಕರಾದ ವೆಂಕಟೇಶ ಆಕಳವಾಡಿ, ಬಸವರಾಜ ಶೇಡದ, ಅನಿತಾ ಪಿ.ಕುರಿ, ಮೇಘನಾ ಕುಲಕರ್ಣಿ, ಶ್ರೀಕಾಂತ್ ತೆರ್ದಾಳ್, ಅರುಣಕುಮಾರ ಗಂಗಾವತಿ, ಸಿದ್ಧಲಿಂಗೇಶ ಯಂಡಿಗೇರಿ, ಉಮೇಶ ಸಂದಿಮನಿ, ಅಮರೇಶ ರಾಠೋಡ, ಸರೋಜಾ ಪಟ್ಟಣಶೆಟ್ಟರ, ವಿದ್ಯಾ ಗದಗ, ವಾಣಿ ಮಾಂಡ್ರೆ, ಬಸವರಾಜ ಮೊರಬದ, ರಾಘವೇಂದ್ರ ಕಮ್ಮಾರ, ಶಿವಣ್ಣ ಸುಳ್ಳದ ಮತ್ತಿತರು ಸಿಬ್ಬಂದಿ ಪಾಲ್ಗೊಂಡಿದ್ದರು. ನಿಂಗಪ್ಪ ಹೂಗಾರ ನಿರೂಪಿಸಿ, ವಂದಿಸಿದರು.
**ಬಾಕ್ಸ್**
ವಿಶೇಷ ವ್ಯಕ್ತಿ ಮತ್ತು ವಿಶೇಷ ಸಂದರ್ಭದಲ್ಲಿ ಇಂತಹ ಶಾಶ್ವತ ಚಿತ್ರಾತ್ಮಕ ಮುದ್ರೆಗಳು ಲೋಕಾರ್ಪಣೆಯಾಗಲಿವೆ. ನಾಡಿನ ಪ್ರಖ್ಯಾತ ಪ್ರವಾಸಿ ತಾಣ ಪರಿಚಯಿಸಲು ಮತ್ತು ಗ್ರಾಹಕರಿಗೆ ತಮ್ಮ ನೆಚ್ಚಿನ ಚಿತ್ರ ಕಳುಹಿಸಲು ಉಪಯೋಗಿಸಬಹುದಾಗಿದೆ. ಇಂತಹ ಮಹತ್ವದ ಶಾಶ್ವತ ಚಿತ್ರಾತ್ಮಕ ಮುದ್ರೆಗಳು ದೇಶದ ಎಲ್ಲೆಡೆ ನಮ್ಮ ನಾಡಿನ ಹೆಮ್ಮೆಯ ಸಾಧಕರ, ಐತಿಹಾಸಿಕ ಮಹತ್ವ, ಅಂತಾರಾಷ್ಟಿçÃಯ ಮಟ್ಟದಲ್ಲಿ ಪ್ರಚಾರ, ಪ್ರಸಿದ್ಧಿ ಪ್ರಚುರಪಡಿಸಲು ಅಂಚೆ ಇಲಾಖೆಯ ಮುದ್ರೆಗಳು ಅತ್ಯಂತ ಸಹಕಾರಿಯಾಗಿದೆ ಎಂದು ಜಯದೇವ ಕಡಗಿ ನುಡಿದರು.