ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕಳಸಾಪೂರ ರಸ್ತೆಯ ಒಳಾಂಗಣ ಕ್ರೀಡಾಂಗಣ ಹಿಂಭಾಗದಲ್ಲಿ ಲಾನ್ ಟೆನ್ನಿಸ್ ಕೋರ್ಟ್ ಶಿಲಾನ್ಯಾಸಕ್ಕೆ ರವಿವಾರ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಚಾಲನೆ ನೀಡಿದರು.
Advertisement
ಈ ಸಂದರ್ಭದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೆಶ್ವರ ವಿಭೂತಿ, ಡಾ. ಶ್ರೀಧರ್ ವಿ.ಕುರಡಗಿ, ಶ್ರೀನಿವಾಸ ಬದಿ, ಶಿವಕುಮಾರ್ ಪಾಟೀಲ್, ಡಾ. ಪವನ್ ಪಾಟೀಲ್, ಡಾ. ಆದಿತ್ಯ ಘೋಡ್ಖಿಂಡಿ, ವಿಕಾಸ್ ಖಟ್ವತೆ, ವೀರೇಶ್ ವಿಜಾಪುರ, ವಿನಯಕುಮಾರ್ ಹೂಗಾರ್, ನಿಖಿಲ್ ಖಾತರಕಿ, ಅಜಿತ್, ರಘು ಮೆಹರ್ವಾಡಿ, ಅಶ್ಫಕ್ ಲಖಾನಿ, ಡಾ. ಜೆ.ಸಿ. ಶಿರೋಳ್, ಡಾ. ವಿ.ಸಿ. ಶಿರೋಳ್ ಮತ್ತಿತರರು ಇದ್ದರು.