HomeGadag Newsಸರ್ಕಾರಿ ಶಾಲೆಗಳ ಮಕ್ಕಳು ಪ್ರತಿಭಾನ್ವಿತರು : ರಜನಿ ಪಾಟೀಲ

ಸರ್ಕಾರಿ ಶಾಲೆಗಳ ಮಕ್ಕಳು ಪ್ರತಿಭಾನ್ವಿತರು : ರಜನಿ ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸರ್ಕಾರಿ ಶಾಲೆಗಳ ಮಕ್ಕಳು ಪ್ರತಿಭಾನ್ವಿತರಾಗಿದ್ದು, ಸಮುದಾಯವು ಈ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕೆಂದು ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ರಜನಿ ಪಾಟೀಲ ಹೇಳಿದರು.
ಅವರು ರಾಜೀವಗಾಂಧಿ ನಗರದಲ್ಲಿ ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ದತ್ತು ತಗೆದುಕೊಂಡ ಶಾಲೆ ನಂ.8ರಲ್ಲಿ ಏರ್ಪಡಿಸಿದ್ದ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇನ್ನರ್‌ವ್ಹೀಲ್ ಕ್ಲಬ್ ಈ ಶಾಲೆಯನ್ನು ದತ್ತು ಪಡೆದು ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ವರ್ಷ ಪೂರ್ತಿ ಈ ಶಾಲೆಯಲ್ಲಿ ಹಮ್ಮಿಕೊಂಡು ಕೊನೆಯಲ್ಲಿ `ಹ್ಯಾಪಿ ಸ್ಕೂಲ್’ ಎಂದು ಘೋಷಣೆ ಮಾಡಲಾಗಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಪಿಡಿಸಿ ಪ್ರೇಮಾ ಗುಳಿಗೌಡರ ಮಾತನಾಡಿ, ಸಮಾಜ ಸೇವೆಯಲ್ಲಿ ಸರ್ವರೂ ಪಾಲ್ಗೊಳ್ಳುವ ಉನ್ನತ ಧ್ಯೇಯದೊಂದಿಗೆ ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವಶ್ಯತೆಗಳನ್ನು ಪೂರೈಸಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹಲವಾರು ಕೊಡುಗೆಗಳನ್ನು ನೀಡಲಾಗಿದೆ ಎಂದರು.
ಮಕ್ಕಳಿಗೆ ಟೈ-ಬೆಲ್ಟ್, ಸ್ಕೂಲ್‌ಬ್ಯಾಗ, ತಟ್ಟೆ-ಲೋಟ, ಕ್ರೀಡಾ ಸಾಮಗ್ರಿ, ನೋಟ್‌ಪುಸ್ತಕ ದಾನವಾಗಿ ನೀಡಿದ ಶಾಂತಾ ಗೌಡರ ಹಾಗೂ ಕ್ಲಬ್‌ನ ಪ್ರೇಮಾ ಗುಳಿಗೌಡರ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ, ಕ್ಷೇತ್ರ ಸಮನ್ವಯಾಧಿಕಾರಿ ಹೆಚ್.ಎಸ್. ಫಾರೂಖಿ, ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೆರಿ ಇವರನ್ನು ಶಾಲೆಯ ಮುಖ್ಯೋಪಾಧ್ಯಾಯ ಎಂ.ಎನ್. ಹೊಸಳ್ಳಿ, ಎಸ್.ವೈ. ಭಜಂತ್ರಿ, ರೂಪಾ ರಾಜೋಳಿ, ಎಂ.ವಿ. ರಾಮಣ್ಣವರ, ವಿದ್ಯಾ ಕಾಡಸಿದ್ಧೇಶ್ವರಮಠ, ಜಿ.ವಿ. ವಸ್ತçದ ಗೌರವಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.
ಪುಷ್ಪಾ ಬಂಡಾರಿ ಪ್ರಾರ್ಥಿಸಿದರು. ರಜನಿ ಪಾಟೀಲ ಸ್ವಾಗತಿಸಿದರು. ಜ್ಯೋತಿ ಭರಮಗೌಡರ್ ನಿರೂಪಿಸಿದರು. ಕೊನೆಯಲ್ಲಿ ಕಾರ್ಯದರ್ಶಿ ಹೇಮಾ ಪೊಂಗಾಲಿಯಾ ವಂದಿಸಿದರು. ಮಂಜುಳಾ ಹಲಗತ್ತಿ, ಮೀನಾಕ್ಷಿ ಕೊರವಣ್ಣವರ, ರೇಖಾ ರೊಟ್ಟಿ, ಪ್ರಿಯಾಂಕಾ ಹಳ್ಳಿ ಮುಂತಾದವರಿದ್ದರು.
ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ಇನ್ನರ್‌ವ್ಹೀಲ್ ಕ್ಲಬ್ ಹಿರಿಯ ಸಂಸ್ಥೆಯಾಗಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿರುವುದು ಹೆಮ್ಮೆಯ ಸಂಗತಿ ಎಂದರು. ಶೈಕ್ಷಣಿಕ ಕೋ ಆರ್ಡಿನೇಟರ್ ನೀಲಾಂಬಿಕಾ ಉಗಲಾಟದ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಹೆಚ್.ಎಸ್. ಫಾರೂಖಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!