ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ಫೆ. 23ರ ಬೆಳಿಗ್ಗೆ 7.30ಕ್ಕೆ ನಡೆಯಲಿರುವ ಬಸವದಳದ 1634ನೇ ಶರಣ ಸಂಗಮದಲ್ಲಿ ಸಹಜ ಶಿವಯೋಗ ಹಾಗೂ ಭಾವೈಕ್ಯತೆಯ ಹರಿಕಾರ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ 76ನೇ ಜಯಂತಿ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಶರಣ ಎಸ್.ಎನ್. ಹಕಾರಿ ವಹಿಸುವರು. ಶರಣ ಸಾಹಿತ್ಯ ಚಿಂತಕ ಶರಣ ಎಸ್.ಎ. ಮುಗದ ಸಹಜ ಶಿವಯೋಗ ಮಾಡುವರು. ಶರಣ ಪ್ರಶಾಂತ ಎಂ.ಲಿಂಗಧಾಳ ಉಪನ್ಯಾಸ ನೀಡುವರು.
ಬಸವದಳದ ಸದಸ್ಯರು, ಶರಣ ಸಾಹಿತ್ಯಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಸಂಘಟಿಕರ ಪರವಾಗಿ ಪ್ರಕಾಶ ಅಸುಂಡಿಯವರು ವಿನಂತಿಸಿದ್ದಾರೆ.



