ಸೆ. 21ರಿಂದ ದೇವಿ ಆರಾಧನೆಯ ಕುರಿತು ಉಪನ್ಯಾಸ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಸೆಪ್ಟೆಂಬರ್ 21ರಿಂದ ಅಕ್ಟೋಬರ್ 2ರವರೆಗೆ ಶರನ್ನವರಾತ್ರಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

Advertisement

ಪ್ರತಿದಿನ ಬೆಳಿಗ್ಗೆ 8.30 ಗಂಟೆಗೆ ಪೂಜೆ ಮತ್ತು ಹೋಮ ಕಾರ್ಯಕ್ರಮ ಜರಗುವುದು. ಸಂಜೆ 4 ಗಂಟೆಗೆ ಕುಂಕುಮಾರ್ಚನೆ, ಲಲಿತ ಸಹಸ್ರನಾಮ ಪಾರಾಯಣ, ದೇವಿ ಸ್ತುತಿ, ಆರತಿ, ಭಜನೆ, ಮಹಾಮಂಗಳಾರತಿ, ಮಹಾಪ್ರಸಾದ ಜರುಗುವುದು.

ಸೆಪ್ಟೆಂಬರ್ 23ರಂದು ಸಂಜೆ 7.30 ಗಂಟೆಗೆ ಮಾದಿಹಳ್ಳಿ ಶ್ರೀ ರಾಮಕೃಷ್ಣ ಮಠದ ಸ್ವಾಮಿ ಮೃತಾನಂದ ಶ್ರೀಗಳು ದೇವಿ ಆರಾಧನೆ ಮಹತ್ವ ಕುರಿತು ಉಪನ್ಯಾಸ ನೀಡುವರು.

ಈ ಎಲ್ಲ ಕಾರ್ಯಕ್ರಮಗಳಿಗೆ ಸಹಕಾರ ನೀಡಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಪೂಜ್ಯಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here