ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ಜೂನ್ 15ರ ಬೆಳಿಗ್ಗೆ 7.30ಕ್ಕೆ ನಡೆಯಲಿರುವ ಬಸವದಳದ 1650ನೇ ಶರಣ ಸಂಗಮದಲ್ಲಿ ಸಹಜ ಶಿವಯೋಗ, ಪೂಜ್ಯ ಪಂ. ಪಂಚಾಕ್ಷರಿ ಗವಾಯಿಗಳವರ ಮತ್ತು ಪೂಜ್ಯ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷ, ಶರಣ ವಿ.ಕೆ. ಕರೇಗೌಡ್ರ ವಹಿಸುವರು. ಶರಣತತ್ವ ಚಿಂತಕಿ, ಶರಣೆ ರೇಣುಕಾ ವಿ.ಕರೇಗೌಡ್ರ ಶಿವಯೋಗ ನಡೆಸಿಕೊಡುವರು. ಪಿ.ಪಿ.ಜಿ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ, ಶರಣ ಡಾ. ಆರ್.ಎಸ್. ದಾನರಡ್ಡಿ ಉಪನ್ಯಾಸ ಮಾಡುವರು.
ಕಾರಣ ಬಸವದಳದ ಸದಸ್ಯರು, ಶರಣ ಸಾಹಿತ್ಯಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಸಂಘಟಕರ ಪರವಾಗಿ ಪ್ರಕಾಶ ಅಸುಂಡಿ ವಿನಂತಿಸಿದ್ದಾರೆ.



