ಹುಬ್ಬಳ್ಳಿ: ನೇಣು ಬಿಗಿದುಕೊಂಡು ಉಪನ್ಯಾಸಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ನಗರದ ಪಿ.ಸಿ.ಜಾಬಿನ್ ಕಾಲೇಜ್ ಕ್ವಾರ್ಟರ್ಸ್ʼನಲ್ಲಿ ನಡೆದಿದೆ. ಪ್ರವೀಣ್ ಕುಮಾರ್(35) ಮೃತ ಉಪನ್ಯಾಸಕನಾಗಿದ್ದು, ಮೃತ ಪ್ರವೀಣ್ ಕುಮಾರ್ ದಾವಣಗೆರೆ ಜಿಲ್ಲೆಯ ನಿವಾಸಿಯಾಗಿದ್ದು,
10 ದಿನ ಹಿಂದಷ್ಟೇ ಗಂಡು ಮಗುವಿಗೆ ಪ್ರವೀಣ್ ಪತ್ನಿ ಜನ್ಮ ನೀಡಿದ್ದರು. ಕಳೆದ 4 ವರ್ಷದಿಂದ ಪಿ.ಸಿ.ಜಾಬಿನ್ ಕಾಲೇಜ್ನಲ್ಲಿ ಕೆಮಿಸ್ಟ್ರಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



