ಉತ್ತಮ ಪುಸ್ತಕಗಳು ಜೀವನದ ಮಾರ್ಗದರ್ಶಿ : ಬಸವರಾಜ

0
Legal Literacy Program
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಉತ್ತಮ ಪುಸ್ತಕಗಳು ಮೌಲ್ಯಾಧಾರಿತ ಆದರ್ಶ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ಹೇಳಿಕೊಡುವ ಮಾರ್ಗದರ್ಶಿಗಳಾಗಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ನುಡಿದರು.

Advertisement

ಅವರು ಮಂಗಳವಾರ ಗದಗ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯಧ್ವನಿ ಮಹಿಳಾ ಮತ್ತು ಮಕ್ಕಳ ಸಂಸ್ಥೆ ಮದ್ದೂರು ಹಾಗೂ ಜಿಲ್ಲಾ ಕಾರಾಗೃಹ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರಾಗೃಹ ಬಂಧಿಗಳಿಗೆ ಮನ ಪರಿವರ್ತನೆಗಾಗಿ ಸಾಹಿತ್ಯದ ಪುಸ್ತಕ ಹಾಗೂ ಮಹಿಳಾ ಬಂದಿಗಳಿಗೆ ವಸ್ತ್ರದಾನ ಕಾರ್ಯಕ್ರಮದ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಚಾರಣಾಧೀನ ಖೈದಿಗಳ ಮನಃಪರಿವರ್ತನೆಗಾಗಿ ಪುಸ್ತಕಗಳನ್ನು ವಿತರಿಸಿದ್ದು, ಖೈದಿಗಳು ಪುಸ್ತಕಗಳನ್ನು ಓದುವ ಮೂಲಕ ಅದರ ವಿಚಾರಧಾರೆಗಳನ್ನು, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಜೈಲಿನಿಂದ ಹೊರಬಂದ ನಂತರ ಉತ್ತಮವಾದ ಜೀವನ ನಡೆಸಬೇಕು. ಈ ಹಿನ್ನೆಲೆಯಲ್ಲಿ ಧ್ವನಿ ಮಹಿಳಾ ಮತ್ತು ಮಕ್ಕಳ ಸಂಸ್ಥೆಯು ಸಾಮಾಜಿಕ ಕಳಕಳಿಯಿಂದ ಪುಸ್ತಕಗಳನ್ನು ವಿತರಿಸಿದೆ. ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಬಿಡುಗಡೆಯ ಬಳಿಕ ಉತ್ತಮ ಜೀವನ ನಡೆಸಿ ಎಂದರು.

ಧ್ವನಿ ಮಹಿಳಾ ಮತ್ತು ಮಕ್ಕಳ ಸಂಸ್ಥೆಯ ಮಂಡ್ಯ ಜಿಲ್ಲಾಧ್ಯಕ್ಷೆ ರಜನಿ ರಾಜ್ ಮಾತನಾಡಿ, ಸಂಸ್ಥೆಯ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖೈದಿಗಳಿಗೆ ಪುಸ್ತಕಗಳನ್ನು ವಿತರಿಸಿದ್ದು, ಖೈದಿಗಳು ಪುಸ್ತಕಗಳನ್ನು ಓದುವ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕರಾಗಬೇಕು ಎಂದರು. ಸಂಸ್ಥೆಯ ಗದಗ ಜಿಲ್ಲಾಧ್ಯಕ್ಷರಾದ ಸುಗುಲಾ ಎಸ್.ಯಳಮಲಿ ಹಾಗೂ ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಎಚ್.ಎ. ಚೌಗಲೆ ಮಾತನಾಡಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ, ಹೆಚ್ಚುವರಿ ಪೊಲೀಸ್ ಉಪಾಧೀಕ್ಷಕ ಎಂ.ಬಿ. ಸಂಕದ, ಲಯನ್ಸ್ ಕ್ಲಬ್‌ಅಧ್ಯಕ್ಷ ಸತೀಶ ಶಾಬಾದಿಮಠ ಉಪಸ್ಥಿತರಿದ್ದರು. ಶಿರಸ್ತೆದಾರ ಬಿ.ಎಂ. ಕುಕನೂರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.


Spread the love

LEAVE A REPLY

Please enter your comment!
Please enter your name here