ಮಂಡ್ಯ: ಜಿಲ್ಲೆಯಲ್ಲಿ ಚಿರತೆ ದಾಳಿ ಪ್ರಕರಣ ಮತ್ತೆ ಮುಂದುವರಿದಿದೆ. ಚಿರತೆಯೊಂದು ಹಸುವಿನ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕೊರಟಿಗೆರೆ ಗ್ರಾಮದಲ್ಲಿ ನಡೆದಿದೆ. ಪ್ರಭಾಕರ್ ಎಂಬುವರಿಗೆ ಸೇರಿದ ಹಸು ಮೇಲೆ ದಾಳಿ ಮಾಡಲಾಗಿದ್ದು,
Advertisement
ಕೆಲ ದಿನಗಳಿಂದಷ್ಟೇ ಪ್ರಭಾಕರ್ ಅವರ ಸಾಕು ನಾಯಿ ಹೊತ್ತೊಯ್ದಿದ್ದ ಅದೇ ಚಿರತೆ ಇದೀಗ ಹಸು ಮೇಲೆ ದಾಳಿ ಮಾಡಿದೆ. ಇನ್ನೂ ಗಾಯಗೊಂಡ ಹಸುವಿಗೆ ಪಶು ವೈದ್ಯರಿಂದ ಚಿಕಿತ್ಸೆ ನೀಡಲಾಗಿದ್ದು,
ಚಿರತೆ ದಾಳಿಯಿಂದ ಗ್ರಾಮದ ಜನರು ಭಯಬೀತರಾಗಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಚಿರತೆ ಸೆರೆ ಹಿಡಿಯುವಂತೆ ಒತ್ತಾಯ ಮಾಡಿದ್ದಾರೆ.