ದೊಡ್ಡಬಳ್ಳಾಪುರ:- ದೊಡ್ಡಬಳ್ಳಾಪುರ ತಾಲ್ಲೂಕಿನ ಕಾರೇಪುರ ಗ್ರಾಮದಲ್ಲಿ ಶೆಡ್‌ನಲ್ಲಿದ್ದ ಹಸು ಮೇಲೆ ಚಿರತೆ ದಾಳಿ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
Advertisement
ನಿನ್ನೆ ರಾತ್ರಿ ರೈತ ರಾಮಸ್ವಾಮಿ ತಮ್ಮ ಹಸುವನ್ನು ಶೆಡ್‌ನಲ್ಲಿ ಕಟ್ಟಿ ಮಲಗಿದ್ದರು. ಮಧ್ಯರಾತ್ರಿ ವೇಳೆ ಏಕಾಏಕಿ ಚಿರತೆ ಬಂದು ಹಸುವಿನ ಮೇಲೆ ದಾಳಿ ಮಾಡಿತು. ಅದು ಹಸುವನ್ನು ಎಳೆದುಕೊಂಡು ಹೋಗಿ, ಹಿಂಬಾಗದ ಮಾಂಸ ತಿಂದ ನಂತರ ಪರಾರಿಯಾಯಿತು.
ಶಬ್ದ ಕೇಳಿ ಮನೆಯಿಂದ ಹೊರಬಂದ ರೈತರು ಚಿರತೆಯನ್ನು ನೋಡಿ ಗಾಬರಿಗೊಂಡರು. ಹೀಗಾಗಿ ಹಿಂಬಾಲಿಸಲು ಸಾಧ್ಯವಾಗಲಿಲ್ಲ. ಈ ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ರಾತ್ರಿ ಸಮಯದಲ್ಲಿ ಹೊರಗೆ ಹೋಗಲು ಹೆದರುತ್ತಿದ್ದಾರೆ.
ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿ, ಚಿರತೆಯನ್ನು ಹಿಡಿಯಲು ಬೋನ್ ಅಳವಡಿಸಬೇಕೆಂದು ಒತ್ತಾಯಿಸಿದ್ದಾರೆ.