ಚಿಕ್ಕಮಗಳೂರು:- ರಸ್ತೆಯಲ್ಲಿ ಹೋಗುತ್ತಿದ್ದ ಇಬ್ಬರ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಮದಗದ ಕೆರೆ ಬಳಿ ಜರುಗಿದೆ.
Advertisement
ಚಿರತೆ ದಾಳಿಗೆ ಒಳಗಾದವರನ್ನು ಮೂರ್ತಣ್ಣ, ಮಂಜಣ್ಣ ಎಂದು ಗುರುತಿಸಲಾಗಿದೆ. ಹಳ್ಳಿಯಿಂದ ಸಖರಾಯಪಟ್ಟಣಕ್ಕೆ ಬರುವಾಗ ಮಾರ್ಗ ಮಧ್ಯೆ ಈ ಘಟನೆ ಜರುಗಿದೆ. ಮೂರ್ತಣ್ಣ ಎಂಬುವರ ಎಡಗೈನ ಒಂದು ಬೆರಳನ್ನು ಚಿರತೆ ತಿಂದಿದೆ ಎಂದು ತಿಳಿದು ಬಂದಿದೆ.
ಹಳ್ಳಿಯಲ್ಲಿ ಜನಸಾಮಾನ್ಯರ ಮೇಲೆ ಚಿರತೆ ದಾಳಿಗೆ ಮುಂದಾಗ್ತಿದ್ದು, ಎಮ್ಮೆದೊಡ್ಡಿಯಲ್ಲಿ ಮನೆಯಿಂದ ಹೊರಬರೋದಕ್ಕೂ ಜನ ಭಯ ಪಡುವಂತಾಗಿದೆ.