ಮಂಡ್ಯ: ಜಿಲ್ಲೆಯಲ್ಲಿ ಚಿರತೆ ಹಾವಳಿ ಮಿತಿ ಮೀರಿದ್ದು ಜನರನ್ನು ಆತಂಕಕ್ಕೀಡುಮಾಡಿದೆ. ತಡರಾತ್ರಿ ಚಿರತೆ ದಾಳಿ ನಡೆಸಿ 3 ಬಂಡೂರು ತಳಿಯ ಕುರಿಗಳನ್ನು ಕೊಂದಿರುವ ಘಟನೆ ಮಂಡ್ಯ ತಾಲ್ಲೂಕಿನ ಹಳೇ ಬೂದನೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಗಯ್ಯ ನಗರ ನಿವಾಸಿ ವಕೀಲ ಅರುಣ್ ಸಾಕಿದ್ದ ಕುರಿಗಳಾಗಿದ್ದು,
Advertisement
ತಡರಾತ್ರಿ ಕುರಿ ಕೊಟ್ಟಿಗೆಗೆ ಚಿರತೆ ನುಗ್ಗಿ ಕುರಿಗಳ ಮೇಲೆ ದಾಳಿ ನಡೆಸಿ ಕೊಂದಿದೆ. ಕಳೆದ ಹಲವು ದಿನಗಳಿಂದ ಗ್ರಾಮದ ಜನನಿಬಿಡ, ಗದ್ದೆಯಂಚಿನ ಮನೆಗಳಿಗೆ ಚಿರತೆ ದಾಳಿ ನಡೆಸುತ್ತಿದ್ದು, ಗ್ರಾಮದ ಹಲವು ನಾಯಿಗಳನ್ನು ತಿಂದಿದೆ. ಬೋನು ಇರಿಸಿದರೂ ಪ್ರಯೋಜನವಾಗಿಲ್ಲ,
ಆದ್ದರಿಂದ ಅರಣ್ಯ ಇಲಾಖೆ ಸೂಕ್ತ ಕಾರ್ಯಾಚರಣೆ ನಡೆಸಬೇಕೇಂದು ರೈತರು ಮನವಿ ಮಾಡಿದ್ದಾರೆ. ಚಿರತೆ ಆಗಮಿಸುವ ದೃಶ್ಯ ಮನೆ ಮಾಲೀಕನ ಮೊಬೈಲಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಅರಣ್ಯ ಅಧಿಕಾರಿ ಲೋಕೇಶ್, ವೈದ್ಯಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ.