ಬೆಂಗಳೂರು: ಅರಣ್ಯ ಗಡಿಭಾಗದ ಗ್ರಾಮಗಳಿಗೆ ಲಗ್ಗೆ ಇಡ್ತಿದ್ದ ಚಿರತೆಗಳು, ಐಟಿ ಸಿಟಿ ಬೆಂಗಳೂರಿನಲ್ಲೂ ಪ್ರತ್ಯಕ್ಷವಾಗ್ತಿವೆ. ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಪ್ರತ್ಯಕ್ಷವಾಗಿದೆ.
Advertisement
ಎಲೆಕ್ಟ್ರಾನಿಕ್ಸ್ ಸಿಟಿಯ ಪಸ್ಟ್ ಪೇಸ್ ಟೋಲ್ ಪ್ಲಾಜಾ ಬಳಿ ಚಿರತೆ ಕಾಣಿಸಿಕೊಂಡಿದೆ. ಬೆಳಗ್ಗೆ 3 ಗಂಟೆ ಸಮಯದಲ್ಲಿ ಹೆದ್ದಾರಿಗೆ ಬಂದಿದೆ. ಪನಕ್ ಇಂಡಿಯಾ ಕಂಪನಿ ಭಾಗದಿಂದ ಎನ್.ಟಿ.ಟಿ.ಎಫ್ ಗ್ರೌಂಡ್ ಭಾಗಕ್ಕೆ ಚಿರತೆ ಹೋಗಿದೆ.
ಐಟಿ ಬಿಟಿ ಕಂಪನಿಗಳಿರುವ ಎಲೆಕ್ಟ್ರಾನಿಕ್ ಸಿಟಿಯ ಜಿಗಣಿ ಸುತ್ತಮುತ್ತ ಕಳೆದ ವಾರ ಚಿರತೆ ಕಾಣಿಸಿಕೊಂಡಿತ್ತು. ಈಗ ಐಟಿಬಿಟಿ ಹೆದ್ದಾರಿಗೆ ಚಿರತೆ ಎಂಟ್ರಿ ಕೊಟ್ಟಿದೆ. ಘಟನೆಯಿಂದ ಐಡಿಬಿಟಿ ಎಲೆಕ್ಟ್ರಾನಿಕ್ ಸಿಟಿ ಮಂದಿ ಆತಂಕದಲ್ಲಿದ್ದಾರೆ.
ಲಕ್ಷಾಂತರ ಕಾರ್ಮಿಕರು ಕೆಲಸ ಮಾಡುವ ಐಟಿಬಿಟಿ ಹಬ್ ಇದಾಗಿದ್ದು, ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.