ವಿಜಯಪುರ:- ದಲಿತ ಮಹಿಳೆ ಬೇಕಿದ್ದರೂ ದಸರಾ ಉದ್ಘಾಟಿಸಲಿ, ಆದ್ರೆ ಲೇಖಕಿ ಭಾನು ಮುಷ್ತಾಕ್ ಆಯ್ಕೆ ಸರಿಯಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ದಸರಾ ಉದ್ಘಾಟನೆಯನ್ನು ಭಾನು ಮುಷ್ತಾಕ್ ಅವರಿಗೆ ವಹಿಸುತ್ತಿರುವುದರ ಹಿಂದೆ ಹಿಂದೂ ದೇವರುಗಳನ್ನ ಮತ್ತು ಪಾವಿತ್ರ್ಯತೆಯನ್ನ ಅಪಮಾನ ಮಾಡುವ ಹುನ್ನಾರ ಅಡಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸವನ್ನ ಸರ್ಕಾರ ಮಾಡುವುದು ಸರಿಯಲ್ಲ. ಮಹಿಳಾ ಸಾಹಿತಿ ಭಾನು ಮುಷ್ತಾಕ್ ಅವರು ಮೊದಲು ಹಿಂದೂ ಧರ್ಮವನ್ನ ಒಪ್ಪುತ್ತೇನೆ. ಮೂರ್ತಿ ಪೂಜೆಯನ್ನು ಒಪ್ಪುತ್ತೇನೆ ಅಂತ ಹೇಳಲಿ.
ಹಿಂದುಯೇತರ ಯಾರೇ ಆಗಲಿ, ದಲಿತ ಮಹಿಳೆ ಬೇಕಿದ್ದರೂ ನಾಡಹಬ್ಬ ದಸರಾ ಉದ್ಘಾಟನೆ ಮಾಡಲಿ. ಆದರೆ ಇಸ್ಲಾಂ ಧರ್ಮದ ಅನುಯಾಯಿಗಳು ದಸರಾ ಉದ್ಘಾಟನೆ ಮಾಡುವುದು ಸರಿ ಅಲ್ಲ. ಅವರು ಬೇಕಿದ್ದರೆ ಕವಿ ಗೋಷ್ಟಿ ಮತ್ತು ಸಾಹಿತ್ಯ ಸಮ್ಮೇಳನಗಳನ್ನು ಉದ್ಘಾಟಿಸಲಿ ಧಾರ್ಮಿಕ ಕಾರ್ಯಕ್ರಮ ಬೇಡ ಎಂದು ಯತ್ನಾಳ್ ಹೇಳಿದ್ದಾರೆ.