ಜನಪದ ಸಾಹಿತ್ಯ ಉಳಿಯಲಿ: ತಹಸೀಲ್ದಾರ ಅನಿಲ ಬಡಿಗೇರ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಪ್ರಸ್ತುತ ದಿನಗಳಲ್ಲಿ ಡಿಜೆ ಸಂಸ್ಕೃತಿ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ಜನಪದ ಸಾಹಿತ್ಯವನ್ನು ಉಳಿಸಿ-ಬೆಳೆಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ತಹಸೀಲ್ದಾರ ಅನಿಲ ಬಡಿಗೇರ ಹೇಳಿದರು.

Advertisement

ಅವರು ಗುರುವಾರ ರಾತ್ರಿ ಶಿರಹಟ್ಟಿಯ ಶ್ರೀ ಬೀರೇಶ್ವರ ಕಾರ್ತಿಕೋತ್ಸವದ ಎರಡನೇ ದಿನ ಮನೆಯೊಂದು ಮೂರು ಬಾಗಿಲು ಡೊಳ್ಳಿನ ಪದಗಳ ತ್ರಿಕೋನ ಸ್ಪರ್ಧೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ 18 ವರ್ಷಗಳಿಂದ ಶ್ರೀ ಬೀರೇಶ್ವರ ಸೇವಾ ಸಮಿತಿ ವತಿಯಿಂದ ಕಾರ್ತಿಕೋತ್ಸವದಲ್ಲಿ ನಿರಂತರವಾಗಿ ಜನಪದ ಸಾಹಿತ್ಯವನ್ನು ಉಳಿಸಿ-ಬೆಳೆಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಸಮಾಜದಲ್ಲಿ ಒಳ್ಳೆಯ ವಾತಾವರಣ ನಿರ್ಮಿಸಲು ಸಹಾಯವಾಗುತ್ತದೆ. ಜೊತೆಗೆ ನಾಡಿನ ಪ್ರಸಿದ್ಧ ಜನಪದ ಕಲಾವಿದರನ್ನು ಕರೆಯಿಸಿ ಅವರಿಗೆ ಗೌರವಿಸುವ ಕಾರ್ಯದ ಜೊತೆಗೆ ಸಾಂಸ್ಕೃತಿಕ ಸಾಹಿತ್ಯವನ್ನು ಆಸ್ವಾದಿಸುವದಕ್ಕೆ ಉತ್ತಮ ವೇದಿಕೆ ಕಲ್ಪಿಸುತ್ತಿದ್ದಾರೆ ಎಂದರು.

ಸಮಿತಿಯ ಮಂಜುನಾಥ ಘಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಬೀರದೇವರ ಪೂಜಾರಿ ಭರಮಪ್ಪ ಪೂಜಾರ ವಹಿಸಿದ್ದರು. ಅಧ್ಯಕ್ಷತೆಯನ್ನು ದೇವಪ್ಪ ಮಾಗಡಿ ವಹಿಸಿದ್ದರು. ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ, ವೀರೇಂದ್ರ ಪಾಟೀಲ, ಹೊನ್ನೇಶ ಪೋಟಿ, ಪ.ಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಜಿಲ್ಲಾ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ, ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಉದ್ಯಮಿ ಪ್ರಕಾಶ ಕರಿ, ದೇವಪ್ಪ ಬಟ್ಟೂರ, ಡಾ. ಪ್ರಕಾಶ ಹೊಸಮನಿ, ನಿಂಗಪ್ಪ ಕರಿಗಾರ, ಯಲ್ಲವ್ವ ದುರಗಣ್ಣವರ, ಈರಯ್ಯ ಮಠಪತಿ, ಅಕ್ಬರಸಾಬ ಯಾದಗಿರಿ, ಶಿವಣ್ಣ ಕರಿಗಾರ, ಫಕ್ಕೀರೇಶ ಮುಶಪ್ಪನವರ, ಆಜು ಮಡಿವಾಳರ, ಕರಿಯಪ್ಪ ಕುಳಗೇರಿ, ಮಹೇಶ ಹಾರೋಗೇರಿ ಇದ್ದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೀಳಗಿಯ ಸಿದ್ದಪ್ಪ ಬಿದರಿ, ಕಂಬಳಿ ಮತ್ತು ಭಂಡಾರ ನಮ್ಮ ಗಟ್ಟಿ ದೇವರು. ಡೊಳ್ಳು ಭಕ್ತಿಯ ಸಂಕೇತವಾಗಿದೆ. ಯುವಕರು ದುಶ್ಚಟಗಳಿಂದ ದೂರವಿರಬೇಕು, ಎಲ್ಲರೂ ಧರ್ಮದಿಂದ ಇರಬೇಕು. ಹಿರಿಯರಿಗೆ, ಗುರುವಿಗೆ, ತಂದೆ-ತಾಯಿಗೆ ವಿಧೇಯರಾಗಿರಬೇಕು. ಉರಿ ಹಚ್ಚುವವರನ್ನು ಬಿಟ್ಟು ಒಳ್ಳೆಯವರ ಜೊತೆಗೆ ಬದುಕನ್ನು ಸಾಗಿಸಿ ಧರ್ಮವಂತರಾಗಿ ಸಮಾಜದಲ್ಲಿ ಬಾಳಬೇಕೆಂದು ಹೇಳಿದರು.


Spread the love

LEAVE A REPLY

Please enter your comment!
Please enter your name here