ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್ ಮಾಡದಂತೆ ದರ್ಶನ್ ಬುದ್ದಿ ಹೇಳಲಿ: ದರ್ಶನ್ ಪುಟ್ಟಣ್ಣಯ್ಯ!

0
Spread the love

ಮಂಡ್ಯ:- ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್ ಮಾಡದಂತೆ ದರ್ಶನ್ ಬುದ್ದಿ ಹೇಳಲಿ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲಹೆ ಕೊಟ್ಟಿದ್ದಾರೆ.

Advertisement

ಈ ಸಂಬಂಧ ಮಾತನಾಡಿದ ದರ್ಶನ್ ಪುಟ್ಟಣ್ಣಯ್ಯ, ಸದ್ಯ ದರ್ಶನ್ ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ಮುಂದೆ ಯಾರು ದೊಡ್ಡವರಲ್ಲ. ತಪ್ಪಿತಸ್ಥರು ಯಾರು, ಅವರಿಗೆ ಶಿಕ್ಷೆ ಆಗುತ್ತೆ ಎಂದು ತಿಳಿಸಿದರು. ಸಾಮಾಜಿಕ ಜಾಲತಾಣದಲ್ಲಿ ಅನಾವಶ್ಯಕವಾಗಿ ಕಾಮೆಂಟ್ ಹಾಕುವುದು ವೇಸ್ಟ್. ಕಾಮೆಂಟ್ ಮಾಡಿ ಅವರನ್ನು ಇವರನ್ನು ಬೈಯ್ಯುವುದರಿಂದ ಏನು ಆಗಲ್ಲ. ಅಭಿಮಾನಿಗಳು ಕೆಟ್ಟ ಕಾಮೆಂಟ್ ಮಾಡದಂತೆ ನಟ ದರ್ಶನ್ ಸಲಹೆ ಕೊಡಬೇಕು. ಈ ಬಗ್ಗೆ ನಾನು ದರ್ಶನ್ ಅವರ ಜೊತೆ ಮಾತಾಡುತ್ತೇನೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಪಾಸಿಟಿವ್ ನೆಗೆಟಿವ್ ಎರಡೂ ಇದೆ. ಜಾಲತಾಣವನ್ನು ಎಲ್ಲರೂ ಪಾಸಿಟಿವ್ ಆಗಿ ಬಳಕೆ ಮಾಡಬೇಕು. ಒಂದು ಪ್ಲಾಟ್‌ಫಾರಂ ನೀಡಿ ಅವರು ಇಷ್ಟ ಬಂದಹಾಗೆ ಮಾಡೋಕೆ ಬಿಡೋಕೆ ಆಗಲ್ಲ. ಸರ್ಕಾರವೂ ಸಹ ಈ ಬಗ್ಗೆ ಗಮನಹರಿಸಬೇಕಾಗಿದೆ. ಜನರನ್ನು ಈ ಸಂಬಂಧ ಎಜುಕೇಟ್ ಮಾಡಬೇಕಾಗಿದೆ ಎಂದು ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ ಕೊಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here