ವಿಜಯಸಾಕ್ಷಿ ಸುದ್ದಿ, ಮುಳಗುಂದ : ಆಧುನಿಕ ಜೀವನದ ಭರಾಟೆಯಲ್ಲಿ ಕಲೆಗಳು ಇಂದು ನಶಿಸಿಹೋಗುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕಿದೆ ಎಂದು ಬಂಜಾರ ಸಮುದಾಯದ ಜಿಲ್ಲಾಧ್ಯಕ್ಷ ಮೋತಿಲಾಲ ರಾಠೋಡ ಹೇಳಿದರು.
Advertisement
ಅವರು ಬಸವನಬಾಗೇವಾಡಿಯಲ್ಲಿ ಎ.ಎಂ.ಆರ್. ಸಂಕಲ್ಪ ಸಂಜೀವಿನಿ ಸಂಸ್ಥೆ ಅರಕೇರಿ, ರಾಷ್ಟ್ರೀಯ ಗೋರ ಬಂಜಾರ ಮೇಳ ಇವರ ಸಹಯೋಗದಲ್ಲಿ ಜರುಗಿದ ಸೋನುಬಾಯಿ ಇವರ ತುಲಾಬಾರ ಹಾಗೂ ಬಂಜಾರ ಕಲಾಮೇಳ ಮತ್ತು ಬಂಜಾರ ಭೂಷಣ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಕೊಡಮಾಡಿ ಮಾತನಾಡಿದರು.
ಗದಗ ಜಿಲ್ಲಾ ನಾಗಾವಿ ತಾಂಡಾ ಜಾನಪದ ಕಲಾವಿದ ಸಂತೋಷ ಪವಾರ, ದೇವು ಲಮಾಣಿ ಇವರಿಗೆ ಬಂಜಾರ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿವ್ಯ ಸಾನ್ನಿಧ್ಯವನ್ನು ಸೋಮಲಿಂಗೇಶ್ವರ ಸ್ವಾಮೀಜಿ ವಹಿಸಿದ್ದರು. ರಮೇಶ ಲಮಾಣಿ, ಬಸವರಾಜ ಲಮಾಣಿ, ಅಮಿತ ರಾಠೋಡ ಇದ್ದರು.