ಬೆಂಗಳೂರು: ರಾಜೀನಾಮೆ ಕೊಟ್ಟು ಸಿದ್ದರಾಮಯ್ಯ ತನಿಖೆಗೆ ಸಹಕರಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯು ಇಂತಹ ಭ್ರಷ್ಟ ಸರ್ಕಾರ, ಭ್ರಷ್ಟ ಸಿಎಂ ವಿರುದ್ಧ ನಿರಂತರ ಹೋರಾಟ ಮಾಡ್ಕೊಂಡು ಬಂದಿದೆ, ಪಾದಯಾತ್ರೆ ನಡೆಸಿದೆ. ಇದರ ಪರಿಣಾಮ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರು. ಹೈಕೋರ್ಟ್ ಸಹ ತನಿಖೆ ನಡೆಸಿ ಅಂದಿದೆ.
Advertisement
ಈಗ ಜನಪ್ರತಿನಿಧಿಗಳ ಕೋರ್ಟ್ ಸಹ ತನಿಖೆ ಮಾಡಲು ಮೈಸೂರು ಲೋಕಾಯುಕ್ತ ಪೊಲೀಸರಿಗೆ ಸೂಚನೆ ಕೊಟ್ಟಿದೆ. ಯಾವ ನಾಯಕನ ವಿರುದ್ಧ ತನಿಖೆಗೆ ಆದೇಶ ಆಗಿದೆಯೋ ಆ ವ್ಯಕ್ತಿ ರಾಜ್ಯದ ಸಿಎಂ. ಇಂಥ ಸಂದರ್ಭದಲ್ಲಿ ಪಾರದರ್ಶಕ ತನಿಖೆ ನಡೆಯುವುದು ಅನುಮಾನ. ಹಾಗಾಗಿ ಕೋರ್ಟ್ ತೀರ್ಪುಗಳನ್ನು ಒಪ್ಪಿಕೊಂಡು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ರಾಜೀನಾಮೆ ಕೊಟ್ಟು ಸಿದ್ದರಾಮಯ್ಯ ತನಿಖೆಗೆ ಸಹಕರಿಸಲಿ ಎಂದು ಒತ್ತಾಯಿಸಿದ್ದಾರೆ.