ಕ್ರೀಡೆ ಶಿಕ್ಷಣದ ಭಾಗವಾಗಲಿ: ಲೋಹಿತ್ ನೆಲವಗಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ನೆಲೆಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಕ್ರೀಡೆಗಳು ಪಠ್ಯಕ್ಕೆ ಪೂರಕವಾಗಿದ್ದು, ಶಾಲಾ ಹಂತದಲ್ಲಿ ಮಕ್ಕಳಿಗೆ ಕ್ರೀಡೆ ಶಿಕ್ಷಣದ ಭಾಗವಾಗಿಸಬೇಕು ಎಂದು ಬಿಸಿಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಲೋಹಿತ್ ನೆಲವಗಿ ಹೇಳಿದರು.

Advertisement

ಪಟ್ಟಣದ ಬಿಸಿಎನ್ ವಿದ್ಯಾಸಂಸ್ಥೆಯ ಬಿಸಿಎನ್ ಸ್ಪೆಕ್ಟಮ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿ ಸ್ಫರ್ಧಾತ್ಮಕ, ಪರಸ್ಪರ ಸ್ನೇಹ, ಸೌಹಾರ್ಧತೆ, ನಾಯಕತ್ವದ ಮನೋಭಾವ ಬೆಳೆಸುವ ಜತೆಗೆ ದೈಹಿಕ-ಮಾನಸಿಕ ಚೈತನ್ಯಶಕ್ತಿಯನ್ನು ನೀಡುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲಾ, ರಾಜ್ಯ, ರಾಷ್ಟç ಮತ್ತು ಅಂತಾಷ್ಟ್ರೀಯ ಕ್ರೀಡಾಪಟುಗಳಾಗಿ ಬೆಳೆಯಬೇಕು ಎಂದರು.

ಶಾಸಕ ಡಾ. ಚಂದ್ರು ಲಮಾಣಿ, ಪಿಎಸ್‌ಐ ನಾಗರಾಜ್ ಗಡಾದ ಮಾತನಾಡಿದರು. ಕ್ರೀಡಾಕೂಟದಲ್ಲಿ ಕುಬ್ಬರ ಕ್ರೀಡಾಕೂಟದ ಅಂತಾರಾಷ್ಟಿçÃಯ ಕ್ರೀಡಾಪಟು ಕಲಘಟಗಿಯ ದೇವಪ್ಪ ಮೊರೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಶಾಂತ ನೆಲವಿಗಿ, ನಾಗರಾಜ್ ಕುಲಕರ್ಣಿ, ನಾಗರಾಜ ಯಂಡಿಗೇರಿ, ವಿರೇಶಕುಮಾರ್, ಭುವನೇಶ್ವರಿ ಕೋಷ್ಠಿ ಸೇರಿ ಶಿಕ್ಷಕರು, ಸಿಬ್ಬಂದಿಗಳು ಇದ್ದರು.


Spread the love

LEAVE A REPLY

Please enter your comment!
Please enter your name here