ಸುಕ್ಷೇತ್ರ ದೇವಗಿರಿ ಪ್ರವಾಸಿ ತಾಣವಾಗಲಿ

0
devagiri
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಲಿಂ. ಪಂ. ಪುಟ್ಟರಾಜರ ಹುಟ್ಟೂರು ದೇವಗಿರಿಯು ಮುಂದಿನ ದಿನಮಾನಗಳಲ್ಲಿ ಪ್ರಸಿದ್ಧ ಪುಣ್ಯಕ್ಷೇತ್ರವಾಗಿ, ಸುಂದರ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳಬೇಕೆಂದು ಶಿರಹಟ್ಟಿಯ ಪೂಜ್ಯ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.

Advertisement

ಅವರು ಗಾನ ಗಂಧರ್ವ ಕಲಾ ಟ್ರಸ್ಟ್ ಗದಗ ಹಾಗೂ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಸಂಗೀತ ಪಾಠಶಾಲೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರ ದೇವಗಿರಿ ಇವರ ಸಹಯೋಗದಲ್ಲಿ ಪದ್ಮಭೂಷಣ ಪುಟ್ಟರಾಜ ಗವಾಯಿಗಳವರ ಕಂಚಿನ ಪುತ್ಹಳಿಯ ಪ್ರತಿಷ್ಠಾಪನೆ, ಪಂ.ಪುಟ್ಟರಾಜ ಗವಾಯಿಗಳವರ ಮಠದ ಗೋಪುರಕ್ಕೆ ಕಳಸಾರೋಹಣ, ಪೂಜ್ಯರ 110ನೇ ಜಯಂತ್ಯುತ್ಸವ, ಶ್ರೀ ಗುರು ಪುಟ್ಟರಾಜ ಪುರಸ್ಕಾರ, ಪುಟ್ಟರಾಜ ಸಂಗೀತ ಸಮಾರೋಹ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವರಾಜ ಶಿವಣ್ಣನವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಯಲು ರಂಗ ಭೂಮಿಗೆ ಮೇಲ್ಚಾವಣಿ ಹಾಕಿಸುವ ಹಾಗೂ ಸುಕ್ಷೇತ್ರ ದೇವಗಿರಿಯನ್ನು ಪ್ರವಾಸಿ ತಾಣವಾಗಿಸುವ ಕುರಿತು ಸಚಿವ ಎಚ್.ಕೆ. ಪಾಟೀಲರ ಜೊತೆ ಚರ್ಚಿಸಿ ಅಭಿವೃದ್ಧಿಪಡಿಸುವ ಭರವಸೆ ನೀಡಿದರು.

ಶಿವರಾಜ ಸಜ್ಜನರ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಗಿರಿ ಗ್ರಾಮದ ಅಭಿವೃದ್ಧಿಗೆ ತಮ್ಮ ಪ್ರಯತ್ನಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿ, ಇದೇ ಸಹಕಾರ ಮುಂದಿನ ಅಭಿವೃದ್ಧಿ ಕಾರ್ಯಗಳಲ್ಲೂ ಜನತೆ ನೀಡಲಿ ಎಂಬ ಆಶಯ ವ್ಯಕ್ತಪಡಿಸಿದರು.

ಬಾಲ ಪ್ರತಿಭೆ ಉಮಾಶ್ರೀ ಗಡ್ಡದಿಮಠ, ಗಾಯತ್ರಿ ಹಿರೇಮಠ, ಚರಣ ಗಡ್ಡದಮಠ, ಪಂಚಾಕ್ಷರಿ ಹಿರೇಮಠರಿಂದ ಗಾಯನ, ದೇವಗಿರಿ ಎಲ್ಲಾಪುರ ಗ್ರಾಮಗಳ ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜಿ. ಸುರಭಿ ಸುರೇಶರ ಗಾಯನ, ಸೃಷ್ಟಿ ಸುರೇಶ ಸಿತಾರ ವಾದನ, ಗಿರಿಮಲ್ಲಿಕಾ ಮಾಂತ, ಸೃಷ್ಟಿ ಕೃಷ್ಣ ಕೆ.ಮಂಗಳೂರು, ಲತಾ ಹುಲಿಕಂತಿಮಠ ಹಾಗೂ ಹರ್ಷಿತಾ ಅಚಲಕರರಿಂದ ಭರತನಾಟ್ಯ ಪ್ರದರ್ಶನ ಜರುಗಿದವು.

ಪೂಜ್ಯಶ್ರೀ ಡಾ. ವೀರೇಶ್ವರ ಶರಣರ `ಶಿವ ಪೂಜಾ ವಿಧಿ’, ಐ.ಕೆ. ಕಮ್ಮಾರರ `ಭೂಲೋಕದ ಭಗವಂತ’ ಗ್ರಂಥಗಳು ಪೂಜ್ಯ ದಿಂಗಾಲೇಶ್ವರ ಶ್ರೀಗಳಿಂದ ಬಿಡುಗಡೆಗೊಂಡವು. ವಿವಿಧ ಕ್ಷೇತ್ರಗಳ ಗಣ್ಯಮಾನ್ಯರು ಮತ್ತು ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಸುಪ್ರೀಂ ಗ್ರೂಪ್‌ನ ಪ್ರಕಾಶ್ ಪೈ ಹಾಗೂ ಫಿಲ್ಕಾನ ಸೇಲ್ಸ್-ಸರ್ವಿಸಸ್ ಇಂಡಸ್ಟಿçಯ ಮಾಲಿಕ ಆರ್.ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ಸಿದ್ದಲಿಂಗಯ್ಯಶಾಸ್ತಿç ಗಡ್ಡದಮಠ, ಕುಮಾರಸ್ವಾಮಿ ಹಿರೇಮಠ ಮತ್ತು ಶಿವಯೋಗಿ ಗಡ್ಡದಮಠ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ಗುರು ಪುಟ್ಟರಾಜ ಪುರಸ್ಕಾರವನ್ನು ನಾಗಲಿಂಗಯ್ಯ ವಸ್ತçದಮಠ (ಗಾನಶ್ರೀ), ಶಂಕರ ಕಬಾಡಿ (ವಾದನ ಶ್ರೀ), ಐ.ಕೆ.ಕಮ್ಮಾರ (ಸಾಹಿತ್ಯಶ್ರೀ), ಅಶೋಕ ಬಸ್ತಿ (ರಂಗಶ್ರೀ), ಚನ್ನವೀರಯ್ಯಶಾಸ್ತಿç ಹಿರೇಮಠ (ಕೀರ್ತನಶ್ರೀ) ಪ್ರದಾನ ಹಾಗೂ ಡಾ. ಎಸ್.ಬಿ. ಶೆಟ್ಟರ ಮತ್ತು ಪೂಜ್ಯರ ಕಂಚಿನ ಪುತ್ತಳಿಯ ಶಿಲ್ಪಿ ಬಿ.ಸಿ. ಶಿವಕುಮಾರ ಇವರಿಗೆ `ವೈದ್ಯ ಶ್ರೀ-ಶಿಲ್ಪ ಶ್ರೀ’ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು.

 


Spread the love

LEAVE A REPLY

Please enter your comment!
Please enter your name here