ವಿಜಯಸಾಕ್ಷಿ ಸುದ್ದಿ, ಗದಗ:ಚಶ್ರೀ ದೊರೆಸ್ವಾಮಿ ವಿರಕ್ತಮಠ, ಬೈರನಹಟ್ಟಿ ಹಾಗೂ ಶಿರೋಳದ ಶ್ರೀ ತೋಂಟದಾರ್ಯಮಠ ಸ್ವಾಮಿಜೀಗಳಾದ ಶ್ರೀ ಶಾಂತಲಿಂಗ ಸ್ವಾಮಿಗಳು ಆಶೀರ್ವದಿಸಿ, ನೆಮ್ಮದಿಯ ಜೀವನದೊಂದಿಗೆ ಬದುಕು ಕಟ್ಟಿಕೊಳ್ಳವಲ್ಲಿ ಸಹಕಾರ ಸಂಘಗಳು ನೇರವಾಗಿವೆ. ಸಹಕಾರ ರಂಗಕ್ಕೆ ಗದಗ ಜಿಲ್ಲೆಯ ದಿ. ಶಿದ್ದನಗೌಡ ಸಣ್ಣರಾಮನಗೌಟ ಪಾಟೀಲರ ಹಾಗೂ ಸಹಕಾರಿ ರಂಗದ ಭೀಷ್ಮ ದಿ. ಕೆ.ಎಚ್. ಪಾಟೀಲರ ಕೊಡುಗೆ ಅಪಾರವಾದುದು ಎಂದರು.
ನಗರದ ಬಸವೇಶ್ವರ ನಗರದ ಸ್ಟೇಷನ್ ರಸ್ತೆಯ ಹಿರೇಮಠ ಟ್ರಸ್ಟ್ ಕಾಂಪ್ಲೆಕ್ಸ್ನಲ್ಲಿ ನೂತನವಾಗಿ ಪ್ರಾರಂಭಿಸಿದ ನೆರವು ಪತ್ತಿನ ಸಹಕಾರಿ ಸಂಘ ನಿಯಮಿತ ಗದಗ ಇದರ ಪ್ರಧಾನ ಕಚೇರಿಯಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನಂತರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ. ಸಂಕನೂರ ಮಾತನಾಡಿ, ಬಡ-ಮಧ್ಯಮ ವರ್ಗದ ಕುಟುಂಬಗಳ, ರೈತರ ಹಾಗೂ ಸಣ್ಣ ಪುಟ್ಟ ವ್ಯಾಪಾರಗಳ ಆರ್ಥಿಕ ಸಬಲತೆಗೆ ನೆರವು ಪತ್ತಿನ ಸಹಕಾರಿ ಸಂಘ ನಿಯಮಿತ ಹೆಸರಿಗೆ ತಕ್ಕಂತೆ ನೆರವು ನೀಡಲಿದೆ. ಏಷ್ಯಾ ಖಂಡದಲ್ಲೇ ಮೊಟ್ಟಮೊದಲು ಸಹಕಾರಿ ಸಂಘ ಸ್ಥಾಪಿಸುವಲ್ಲಿ ದಿ. ಶಿದ್ಧನಗೌಡ ಸಣ್ಣರಾಮನಗೌಡ ಪಾಟೀಲ ಹಾಗೂ ಸಹಕಾರಿ ರಂಗದ ಭೀಷ್ಮ ದಿ. ಕೆ.ಎಚ್. ಪಾಟೀಲ ಹಾಗೂ ಆ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದವರನ್ನು ನಾವು ನೆನೆಯುವದು ಆದ್ಯ ಕರ್ತವ್ಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಹಾಗೂ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಸಿದ್ಧರಾಮಯ್ಯ ಸಂಶಿಮಠ ಮಾತನಾಡಿ, ಪಾರದರ್ಶಕತೆಯಿಂದ ಸಹಕಾರ ಸಂಘ ನಡೆಸಿದರೆ ಸಂಘಕ್ಕೆ ಉತ್ತಮ ಭವಿಷ್ಯವಿದೆ ಎಂದರು.
ವಿಶೇಷ ಆಹ್ವಾನಿತರಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಡಿ.ಎಸ್. ತಳವಾರ ರಾಜ್ಯ ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನದ ಅಧ್ಯಕ್ಷ ಬಿ.ಎ. ಪಾಟೀಲ, ಅತಿಥಿಗಳಾಗಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಶಿವಪುತ್ರಪ್ಪ ಬೇವಿನಮರದ, ಶ್ರೀ ಶಂಕರಲಿAಗ ದೇವಸ್ಥಾನದ ಧರ್ಮದರ್ಶಿಗಳಾದ ಅರುಣ ಮುನವಳ್ಳಿ, ಶ್ರೀ ಕಟ್ಟಿಬಸವೇಶ್ವರ ಹಾಗೂ ಪಂಚಮೂರ್ತಿ ಹಾಗೂ ನವಗ್ರಹ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಭೀಮರಡ್ಡಿ ಕಿಲಬಣ್ಣವರ ಪಾಲ್ಗೊಂಡಿದ್ದರು.
ಗದಗ ತಾಲೂಕ ಸಹಕಾರಿ ಸಂಘದ ನಿರೀಕ್ಷಕರಾದ ಶಾಂತಾ ಹಿರೇಮಠ, ಎಸ್. ಲೇಡ್ಜರ್ ತಂತ್ರಾAಶ ಸಂಸ್ಥೆಯ ಹಿರಿಯ ವ್ಯವಸ್ಥಾಪ (ಮಾರುಕಟ್ಟೆ ವಿಭಾಗ) ಆನಂದ ಆಶ್ರಿತ, ನರಗುಂದದ ಲೆಕ್ಕ ಪರಿಶೋಧಕ ಸಹಾಯಕ ಮಹಾಂತೇಶ ಸೂರಪೂರ, ರಾಷ್ಟಿçÃಯ ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನದ ಅಧ್ಯಕ್ಷ ವಿಜಯ ದೇಶಮುಖ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸದಸ್ಯರಿಗೆ ಸಾಂಕೇತೀಕವಾಗಿ ಷೇರು ಪ್ರಮಾಣಪತ್ರವನ್ನು ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಭಾರತ ಸ್ವಾಭಿಯಾನ ಟ್ರಸ್ಟ್ನ ಜಿಲ್ಲಾ ಪ್ರಭಾರಿ ರುದ್ರಣ್ಣ ಗುಳಗುಳಿ ವಹಿಸಿದ್ದರು. ಸಂಘದ ಉಪಾಧ್ಯಕ್ಷರಾದ ಶಿವಕುಮಾರಗೌಡ ಪಾಟೀಲ, ಗೌರವ ಕಾರ್ಯದರ್ಶಿ ಶರಣೇಶ ಇಟಗಿ, ನಿರ್ದೇಶಕರಾದ ಶಂಕರ ಕಾರದಕಟ್ಟಿ, ದಾನೇಶ ತಡಸದ, ಶ್ರೀಶೈಲ ತಡಸದ, ರಮೇಶ ಗಾರವಾಡ, ವಿಶ್ವನಾಥ ಅಂಗಡಿ, ನಾಗರಾಜ ಬೇವಿನಕಟ್ಟಿ, ಶ್ರೀಕಾಂತ ಜವಳಿ, ರೂಪಾ ಗೋಕಾವಿ, ಪ್ರಿಯಾ ಕಬಾಡಿ, ಶ್ರೀ ವರಸಿದ್ಧಿ ವಿನಾಯಕ ಮಿತ್ರ ಮಂಡಳಿ ಸದಸ್ಯರಾದ ಕಿರಣ ಕಬಾಡಿ, ಅನಿಲ ಶೆಟ್ಟರ ಮುಂತಾದವರು ಉಪಸ್ಥಿತರಿದರು. ಸಂಘದ ಅಧ್ಯಕ್ಷ ವಿಶ್ವನಾಥ ಶೀರಿ ಸ್ವಾಗತಿಸಿ, ವಂದಿಸಿದರು.
ವಾರ್ಡ್ ನಂ.15ರ ನಗರಸಭಾ ಸದಸ್ಯ ಚಂದ್ರು ತಡಸದ ಮಾತನಾಡಿ, ನಮ್ಮ ವಾರ್ಡಿನ ಜನೆತೆ ಹಾಗೂ ಸಾರ್ವಜನಿಕರು ಸದರಿ ಸಂಘದಲ್ಲಿ ಷೇರುಗಳನ್ನು ಪಡೆಯುವ ಮೂಲಕ ಸಹಕಾರ ನೀಡೋಣ. ಸಹಕಾರ ಸಂಘಗಳನ್ನು ಮುನ್ನಡೆಸಲು ಬೆಳಗಾವಿ ಜಿಲ್ಲೆಯಲ್ಲಿರುವ ಸಂಘಗಳನ್ನು ನಾವು ಮಾದರಿಯಾಗಿ ಇಟ್ಟುಕೊಂಡರೆ ನಮಗೆ ಸಹಾಯವಾಗಲಿದೆ ಎಂದರು.