ಎರಡು ಅಕ್ಷರದ ಈ ಪ್ರೀತಿ
ಆರಂಭವಾಗುವುದು ನಾನಾ ರೀತಿ
ಹಗಲು ಇರುಳು ಬರೀ ಭ್ರಾಂತಿ
ಎರಡು ಹೃದಯಗಳ ಸಂಕ್ರಾಂತಿ (1)
Advertisement
ತುಂಟಾಟದ ಸೋದರ ಮಾವನಂತೆ
ಭಾವನೆಗಳಿಗೆ ಸ್ಪಂದಿಸುವ ಕೃಷ್ಣನಂತೆ
ಜೈಯಂಕರಿಸುವ ಶ್ರೀರಾಮನಂತೆ
ಬಾಳು ಬೆಳಗುವ ಚಂದ್ರನ ಬೆಳಕಿನಂತೆ (2)
ಏಳು ಜನುಮದ ಋಣಾನುಬಂಧನೆ
ಮನದಲ್ಲಿ ಕೊಟಿ ಕನಸುಗಳ ಕಲ್ಪನೆ
ಶೀವ ಪಾರ್ವತಿಯರಿಗೂ ನಮ್ಮ ವಂದನೆ
ಬದುಕಿನುದ್ದಕ್ಕೂ ಈ ಪ್ರೀತಿ ಆರಾಧನೆ (3)
ಯುಗ ಯುಗಾಂತರಗಳಿಂದ ಪ್ರಜ್ವಲಿಸುವ ಪ್ರೀತಿ ಶಾಶ್ವತ
ಪ್ರೀತಿ ಪ್ರೇಮ ಪ್ರಣಯ ಪ್ರಸಂಗದ ಬೆಸುಗೆಯ ರಾಧಾಂತ
ಪ್ರೀತಿಯ ಜ್ಯೋತಿ ವಿಶ್ವಕ್ಕೆ ವಿಶ್ವಪಥ
ಮನ ಮನೆಯಲ್ಲಿ ಬೆಳಗಲಿ ಜ್ಞಾನ ದೀವಿಗೆ
ಸದಾ ಕಾಲ ಪರಿಮಳ ಬೀರುತ್ತಾ (4)
– ಸುವರ್ಣ ಮಾಳಗಿಮನಿ (ಬಸುಮಾ)
ಶಾಬಜಾರ, ಬಂಕಾಪುರ.