ವಿಜಯಸಾಕ್ಷಿ ಸುದ್ದಿ, ಗದಗ : ಗಂಗಾ ಮಾತೆ ಹಾಗೂ ಭೀಷ್ಮ ಕುಲದ ಸಮುದಾಯದ ಬೆಳವಣಿಗೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿನೂತನ ಯೋಜನೆಗಳನ್ನು ಅನುಷ್ಠಾನ ಮಾಡಲು ಗದಗ ಜಿಲ್ಲಾ ನಿಜ ಶರಣ ಶ್ರೀ ಅಂಬಿಗರ ಚೌಡಯ್ಯ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಹಾದಿಮನಿ ಆಗ್ರಹಿಸಿದ್ದಾರೆ.
Advertisement
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ, ಸಮುದಾಯದ ಜನ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದು, ಸಮುದಾಯವನ್ನು ಸರಕಾರಗಳು ನಿರ್ಲಕ್ಷ್ಯ ಮಾಡುತ್ತಿರುವದು ಸೂಕ್ತವಲ್ಲ. ಗಂಗಾಮತಸ್ಥ ಸಮುದಾಯದ ಕುರುಹು ಸಾರುವ ನಗರದ ಹೃದಯ ಭಾಗದಲ್ಲಿರುವ ಭೀಷ್ಮ ಕೆರೆ ಕೇವಲ ಹೆಸರಿಗೆ ಸೀಮಿತವಾಗಿದೆ. ಗಂಗಾಮತ ಸಮುದಾಯದ ಜನ ಮೀನುಗಾರಿಕೆ ಹಾಗೂ ಸುಣ್ಣದ ವ್ಯಾಪಾರ, ಸಣ್ಣಪುಟ್ಟ ಕೆಲಸ ಮಾಡುತ್ತ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಸಣ್ಣ ಸಮುದಾಯದ ಮೂಲವೃತ್ತಿ ಬಯಸುವವರಿಗೆ ಹೊಸ ಯೋಜನೆ ರೂಪಿಸಲಿ ಎಂದು ಆಗ್ರಹಿಸಿದ್ದಾರೆ.