ಮಾಧ್ಯಮಗಳು ಒಳ್ಳೆಯ ಸುದ್ದಿಗೆ ಆದ್ಯತೆ ನೀಡಲಿ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಭಾರತ ಹುಣ್ಣಿಮೆ ದಿನ ನಿವೃತ್ತ ಆರ್ಮಿ ಕ್ಯಾಪ್ಟನ್ ಬಿ.ಬಿ. ಚಕ್ರಸಾಲಿ ಅವರ ಪುಸ್ತಕ ಬಿಡುಗಡೆ ಮಾಡಿದ್ದು ನನ್ನ ಸೌಭಾಗ್ಯ. ಛಂದಸ್ಸು ಮತ್ತು ಷಟ್ಪದಿಗಳಲ್ಲಿ ಚಿಕ್ಕದಾದರೂ ಚೊಕ್ಕದಾಗಿ `ಶರಣರ ಸದನ’ ಎಂಬ ಕೃತಿ ಬರೆದಿದ್ದಾರೆ ಎಂದು ಮಹಾಂತ ಪ್ರಥಮದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಸಹ ಪ್ರಾಧ್ಯಾಪಕರಾದ ಡಾ. ಪುಷ್ಪಾ ಬಸನಗೌಡರ ಹೇಳಿದರು.

Advertisement

ಆಲೂರ ವೆಂಕಟರಾವ ಸಭಾಭವನದಲ್ಲಿ ನಮ್ಮ ಬಸವ ಸೇನೆ ಬೆಂಗಳೂರು ಹಾಗೂ ಧಾರವಾಡ ನ್ಯೂಸ್ ಆಶ್ರಯದಲ್ಲಿ ನಿವೃತ್ತ ಕ್ಯಾಪ್ಟನ್ ಬಿ.ಬಿ. ಚಕ್ರಸಾಲಿ ರಚನೆಯ `ಶರಣರ ಸದನ’ ಪುಸ್ತಕ ಬಿಡುಗಡೆ ಸಮಾರಂಭ, `ಬಸವ ಶ್ರೀ’ ಹಾಗೂ `ಬಸವ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ರಾಮಚಂದ್ರ ಕುಲಕರ್ಣಿ ನಿಧನಕ್ಕೆ ಸಂತಾಪ ಸೂಚಿಸಿ, ಮೌನಾಚರಣೆ ಮಾಡಲಾಯಿತು.

ಮನಗುಂಡಿ ಶ್ರೀ ಗುರುಬಸವ ಮಹಾಮನೆಯ ಬಸವಾನಂದ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿ, ಇಂದಿನ ಮಾಧ್ಯಮಗಳು ಕೆಟ್ಟದ್ದನ್ನು ಹೆಚ್ಚು ಹೆಚ್ಚಾಗಿ ತೋರಿಸುತ್ತಾರೆ. ಆದರೆ ಅದೇ ಒಳ್ಳೆಯದನ್ನು ಮಾಡಿರುವವರ ಬಗ್ಗೆ ತೋರಿಸದಿರುವುದು ನೋವಿನ ಸಂಗತಿ. ಮಾಧ್ಯಮಗಳು ಒಳ್ಳೆಯ ಸುದ್ದಿಗೆ ಹೆಚ್ಚಿನ ಆದ್ಯತೆ ನೀಡಲಿ ಎಂದು ಸಲಹೆ ನೀಡಿದರು.

ನಮ್ಮ ಬಸವ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಹಾಗೂ ಅಖಿಲ ಕರ್ನಾಟಕ ಪತ್ರಕರ್ತರ ಅಕಾಡೆಮಿ ರಾಜ್ಯಾಧ್ಯಕ್ಷ ಲೋಕೇಶ ಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ಹಾಗೂ ಪ್ರಶಸ್ತಿಗೆ ಯೋಗ್ಯವಾಗಿರುವಂತಹ ವ್ಯಕ್ತಿಗಳನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದರು.

ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್‌ನ ಅಧ್ಯಕ್ಷರು ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಲತಾ ಎಸ್.ಮುಳ್ಳೂರ ಮಾತನಾಡಿ,. ನಿವೃತ್ತಿಯ ನಂತರ ಸಮಯ ಹಾಳು ಮಾಡದೇ ಈ ಪುಸ್ತಕ ರಚಿಸಿರುವದು ಹೆಮ್ಮೆಯ ವಿಷಯ ಎಂದರು.

ಮನಸೂರಿನ ರೇವಣಸಿದ್ದೇಶ್ವರ ಮಹಾಮಠದ ಡಾ. ಬಸವರಾಜ ದೇವರು ಸಾಮಾಜಿಕ, ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಬಸವ ಶ್ರೀ ಹಾಗೂ ಬಸವ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಾದ ಶಂಕರ ಗಂಗಣ್ಣವರ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ, ಪತ್ರಕರ್ತೆ ಹಾಗೂ ವಕೀಲರಾದ ರಮ್ಯಾ ವರ್ಷಿಣಿ ಬಸವಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಶರಣರ ಸದನ ಪುಸ್ತಕ ಬರೆದಿರುವ ನಿವೃತ್ತ ಆರ್ಮಿ ಕ್ಯಾಪ್ಟನ್ ಬಿ.ಬಿ. ಚಕ್ರಸಾಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಧಾರವಾಡ ನ್ಯೂಸ್ ಸಂಪಾದಕ ಬಸವರಾಜ ಆನೆಗುಂದಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಬೆಳಗಾವಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ವಿ. ಕೃಷ್ಣಮೂರ್ತಿ, ಶ್ರೀ ಶಿವಾನಂದಸ್ವಾಮಿ ಬೇತೂರಮಠ ಟ್ರಸ್ಟ್ನ ಅಧ್ಯಕ್ಷ ಮಹಾಂತೇಶ ಬೇತೂರಮಠ, ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಧಾರವಾಡ ಜಿಲ್ಲಾಧ್ಯಕ್ಷ ಅಶೋಕ ಶೆಟ್ಟರ್, ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ (ಕ್ರಾಂತಿ) ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥ ತಿಮ್ಮಣ್ಣ ಹಿರೇಮನಿ, ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಬಸವರಾಜ ಬೂದಿಹಾಳ ಭಾಗವಹಿಸಿದ್ದರು.

ಜೈಹಿಂದ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ರವಿ ಪೂಜಾರ, ಬೆಳಗಲಿ ಪಿಡಿಓ ವಿಶ್ವನಾಥ ಟಿಂಗ್ರಿಕರ, ಬಿಜೆಪಿ ಯುವ ಮುಖಂಡ ಬಸವರಾಜ ರುದ್ರಾಪೂರ, ಡಿಎಸ್‌ಎಸ್ ರಾಜ್ಯ ಸಂಚಾಲಕರಾದ ಲಕ್ಷ್ಮಣ ಬ.ದೊಡ್ಡಮನಿ, ಡಿಎಸ್‌ಎಸ್ ಮುಖಂಡರಾದ ನಾರಾಯಣ ಮಾದರ, ಹನಮಂತ ಮೊರಬ, ಅಶೋಕ ಭಂಡಾರಿ, ಪತ್ರಕರ್ತರಾದ ಲಿಂಗರಾಜ ಪಾಟೀಲ, ರಮಾನಂದ ಕಮ್ಮಾರ, ಚಂದ್ರಶೇಖರ ಹಿರೇಮಠ, ಈರಣ್ಣ ಗುರಿಕಾರ, ಕೋಣಪ್ಪ ಸಾಲೋಟಗಿ (ಎಸ್.ಕಲ್ಯಾಣಕುಮಾರ), ನಮ್ಮ ಬಸವ ಸೇನೆ ವ್ಯವಸ್ಥಾಪಕ ರಾಜಮಲ್ಲು, ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಬೆಳಗಾವಿ ಜಿಲ್ಲಾಧ್ಯಕ್ಷರಾದ ಬಸವರಾಜ ರುದ್ರಾಪೂರ, ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ ರಾಜ್ಯ ಸಮಿತಿ ಸದಸ್ಯರಾದ ಉಳವೇಶ ದುಂಡಾನಟ್ಟಿ ಅವರನ್ನು ಸನ್ಮಾನಿಸಲಾಯಿತು.

`ಬಸವ ಶ್ರೀ’ ಪ್ರಶಸ್ತಿಯನ್ನು ಡಾ. ವೀಣಾ ಬಿರಾದಾರ, ಯಮನಪ್ಪ ಜಾಲಗಾರ, ಉಮರಖನ್ ಮೈ. ಚಪ್ಪರಬಂದ, ಡಾ. ಕುಮದ್ವತಿ ಶಂಕರಗೌಡ ಭರಮಗೌಡ್ರ, ಡಾ. ಲತಾ ಎಸ್. ಮುಳ್ಳೂರ, ಬಿ.ಆರ್. ಚಂದ್ರಶೇಖರ, ರಮ್ಯಾ ವರ್ಷಿಣಿ, ವಿಲಿಯಮ್ಸ್, ಸುಲೋಚನಾ ಕೆ.ಮುದಲಿಯಾರ, ವಿಜಯಲಕ್ಷ್ಮೀ ಕಮ್ಮಾರ ಅವರಿಗೆ ಪ್ರದಾನ ಮಾಡಲಾಯಿತು.

`ಬಸವ ರತ್ನ’ ಪ್ರಶಸ್ತಿಯನ್ನು ಮಹಾಂತೇಶ ಬ.ಬಡ್ಲಿ, ಬಸವರಾಜ ಎಸ್.ಕುದರಿ, ಸುನಂದಾ ರಾಮ್ ಕರಿಗಾರ, ಗಂಗಾಂಬಿಕೆ ತಿಪ್ಪಣ್ಣ ಕುರುಬರ, ಗಂಗವ್ವ ಮಲ್ಲಿಕಾರ್ಜುನ ಮುಗಳಿ, ನೇತ್ರಾವತಿ ಮಡ್ಲಿ, ಡಾ. ಭೀಮಾಶಂಕರ ಎಂ.ಆರ್., ಸುವರ್ಣಾ ಬಿ.ಸುರಕೋಡ, ಸತೀಶ ಎಸ್.ಸರ್ಜಾಪೂರ, ರತ್ನಾ ಗೋಧಿ, ರತ್ನಕುಮಾರ, ಅಶ್ವತಪ್ಪ, ಶ್ರೀನಿವಾಸ ಅವರೊಳ್ಳಿ, ಮಂಜುನಾಥ ತಿಮ್ಮಣ್ಣ ಹಿರೇಮನಿ, ಸಿದ್ಧಾರ್ಥ ಪಾತ್ರೋಟಿ, ಬಸವರಾಜ ಪಾತ್ರೋಟಿ ಅವರಿಗೆ ಪ್ರದಾನ ಮಾಡಲಾಯಿತು.


Spread the love

LEAVE A REPLY

Please enter your comment!
Please enter your name here