ಅಧಿಕಾರಿಗಳ ದರ್ಬಾರಿಗೆ ಶಾಸಕರೇ ಮದ್ದರೆಯಲಿ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಕೇಂದ್ರಸ್ಥಳ ಹಾಗೂ ತಾಲೂಕಾ ಆಡಳಿತದ ಕೇಂದ್ರವಾಗಿದೆ. ತಾಲೂಕಿನಲ್ಲಿಯ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಬೇಕಿದ್ದ ತಾಲೂಕು ಪಂಚಾಯಿತಿಯಲ್ಲಿ ಕಳೆದ 13 ತಿಂಗಳಿನಿಂದ ಸಾಮಾನ್ಯ ಸಭೆಯೇ ನಡೆಯದೆ ಸಾರ್ವಜನಿಕರು ಸುಸ್ತಾಗುತ್ತಿದ್ದಾರೆ.

Advertisement

ತಾ.ಪಂ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ 5-7-2024ರಂದು ಸಾಮಾನ್ಯ ಸಭೆ ನಡೆದಿತ್ತು. 21-9-2023ರಂದು ಮಾಸಿಕ ಕೆಡಿಪಿ ಸಭೆ ಹಾಗೂ 11-2-2025ರಂದು ತ್ರೈಮಾಸಿಕ ಕೆಡಿಪಿ ಸಭೆ ನಡೆದಿದೆ. ಈ ಸಭೆಗಳಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಯ ಕುರಿತು ಚರ್ಚೆ ನಡೆಯಬೇಕಿತ್ತು. ಆದರೆ ಸಭೆಗಳೇ ನಡೆಯದೇ ಹೋದರೆ ಪರಿಶೀಲನೆ ನಡೆಸುವವರಾರು, ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವೆಯಾ ಎಂಬುದನ್ನು ಗಮನಿಸುವವರು ಯಾರು, ಇತ್ತೀಚೆಗೆ ತಾಲೂಕಾ ಮಟ್ಟದ ಅಧಿಕಾರಿಗಳಲ್ಲಿ ಬಹುತೇಕರು ಹೊಸಬರು ಬಂದಿದ್ದು, ಸಾರ್ವಜನಿಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾದರೆ ತಾಲೂಕಿನ ಅಭಿವೃದ್ದಿ ಕುಂಠಿತವಾದರೆ ಯಾರು ಹೊಣೆ ಎಂಬ ಪ್ರಶ್ನೆಗಳು ಜನಸಾಮಾನ್ಯರ ತಲೆಯ ಸುತ್ತ ಗಿರಕಿ ಹೊಡೆಯುತ್ತಿವೆ.

ಶಾಸಕ ಡಾ. ಚಂದ್ರು ಲಮಾಣಿ ಈ ಅವ್ಯವಸ್ಥೆಯ ಬಗ್ಗೆ ಗಮನ ಹರಿಸುವುದು ಅವಶ್ಯವಿದೆ. ತಾಲೂಕಿನ ಬಹುತೇಕ ಕಡೆಗಳಲ್ಲಿ ವಿವಿಧ ಯೋಜನೆಗಳಲ್ಲಿ ಹಲವು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ಇವುಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಬೇಕಿದ್ದ ಪ್ರಗತಿಪರಿಶೀಲನಾ ಸಭೆಗಳು ನಡೆಯದೇ ಇರುವುದು ಹಲವು ಅಧಿಕಾರಿಗಳಿಗೆ ಲಾಭದಾಯಕವಾಗಿ ಪರಿಣಮಿಸುತ್ತಿದೆ. ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಈ ಅವ್ಯವಸ್ಥೆ ಮಾರಕವಾಗುತ್ತಿದೆ. ಆದ್ದರಿಂದ ಈ ಕೂಡಲೇ ತಮ್ಮ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಿ ತಾಲೂಕಿನ ಸಮಗ್ರ ಅಭಿವೃದ್ಧಿಯ ಕುರಿತು ಚರ್ಚೆ ನಡೆಸುವುದು ಅವಶ್ಯವಿದೆ. ಬೇಜವಾಬ್ದಾರಿ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಬೇಕೆಂಬುದು ತಾಲೂಕಿನ ಪ್ರಜ್ಞಾವಂತರ ಅನಿಸಿಕೆಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಡಾ. ಚಂದ್ರು ಲಮಾಣಿ, ಇದೇ ವಾರದಲ್ಲಿ ಸಭೆ ನಡೆಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ವಿ. ದೊಡ್ಡಮನಿ ಪ್ರತಿಕ್ರಿಯಿಸಿ, ಶಾಸಕರ ದಿನಾಂಕ ಪಡೆದು ಸಭೆ ನಿಗದಿಪಡಿಸಲಾಗುವುದು ಎಂದಿದ್ದಾರೆ.

ತಾ.ಪಂನಲ್ಲಿ ಆಡಳಿತ ಮಂಡಳಿ ಇಲ್ಲದೆ, ಪ್ರಗತಿ ಪರಿಶೀಲನೆ ಸಭೆಗಳೂ ಸಕಾಲಕ್ಕೆ ನಡೆಯದೇ ಇರುವುದರಿಂದ ಹಲವು ಅಧಿಕಾರಿಗಳಿಗೆ ಇದು ವರವಾಗಿ ಪರಿಣಮಿಸಿದೆ. ತಮ್ಮ ಇಲಾಖೆಯಲ್ಲಿ ತಾವು ಏನು ಮಾಡಿದರೂ ನಡೆಯುತ್ತೆ, ಇದನ್ನು ಕೇಳೋರು ಯಾರೂ ಇಲ್ಲವೆನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಅಥವಾ ಸ್ಥಳೀಯ ಶಾಸಕರೇ ಇದಕ್ಕೆ ಮದ್ದರೆಯಬೇಕಿದೆ.


Spread the love

LEAVE A REPLY

Please enter your comment!
Please enter your name here