ಕೇಂದ್ರ ಗೃಹ ಸಚಿವರು ರಾಜೀನಾಮೆ ನೀಡಲಿ

0
Spread the love

ವಿಜಯಸಾಕ್ಷಿ ಸುದ್ದಿ, ಬೀದರ: ಸಂವಿಧಾನದ ಕರ್ತೃ ಬಾಬಾ ಸಾಹೇಬ್ ಅಂಬೇಡ್ಕರ್‌ರನ್ನು ನಿಂದಿಸುವ ಮೂಲಕ ಗೃಹ ಮಂತ್ರಿ ಅಮಿತ್ ಶಾ ತಮ್ಮ ಫ್ಯಾಸಿಟ್ಸ್ ಮನಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆAದು ವೆಲ್ಫೇರ್ ಪಾರ್ಟಿ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.

Advertisement

ಅವರು ಬೀದರ ನಗರದಲ್ಲಿ ಅಮಿತ ಶಾ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡುತ್ತ, ಗೃಹ ಮಂತ್ರಿಗಳ ಈ ಹೇಳಿಕೆ ಖಂಡನೀಯ. ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ಹೇಳುವುದು ಭಾರತೀಯರೆಲ್ಲರಿಗೆ ಹೆಮ್ಮೆಯ ವಿಚಾರವಾಗಿದೆ. ಅವರು ಈ ದೇಶಕ್ಕೆ ಒಂದು ಮಾದರಿ ಸಂವಿಧಾನ ರೂಪಿಸಿದವರು. ಹಿಂದುಳಿದ, ಅಲ್ಪಸಂಖ್ಯಾತರ ಧ್ವನಿಯಾದವರು. ಅವರ ಬಗ್ಗೆ ಇಷ್ಟು ಕೀಳು ಭಾವನೆ ಇಟ್ಟುಕೊಳ್ಳುವುದು ಈ ದೇಶದ ಗೃಹ ಸಚಿವರಿಗೆಶೋಭೆ ತರುವುದಿಲ್ಲ ಎಂದರು.

ಬಾಬಾ ಸಾಹೇಬ್ ಹೆಸರನ್ನು ಕೇಳಲು ಕೋಮುವ್ಯಸನಿಗಳಿಗೆ ಕರ್ಕಶವಾಗಬಹುದು. ಆದರೆ ಇಲ್ಲಿನ ದಲಿತರ, ಹಿಂದುಳಿದವರ, ದುರ್ಬಲರ ಹಕ್ಕುಗಳಿಗೆ ಹೋರಾಡಿದ ಮಹನೀಯರಾದ ಅಂಬೇಡ್ಕರ್‌ರ ಸೇವೆ ಸ್ಮರಣೀಯ. ಆ ಹೆಸರು ನಾವು ಎಂದಿಗೂ ಸ್ಮರಿಸಿ ಹೇಳುತ್ತಿರುವುದು ನಿಮಗೆ ವ್ಯಸನದಂತೆ ಕಂಡರೆ ಅದು ನಿಮ್ಮ ಮಾನಸಿಕ ಸಮಸ್ಯೆಯಾಗಿದೆ. ಡಾ. ಅಂಬೇಡ್ಕರರAತಹ ಮಹಾನ್ ವ್ಯಕ್ತಿಯನ್ನು ನಿಂದಿಸುವ ಮೂಲಕ ಇಡೀ ದೇಶದ ನಾಗರಿಕರ ಮನಸಿಗೆ ಘಾಸಿಯುಂಟು ಮಾಡಿರುವ ಗೃಹ ಮಂತ್ರಿಗಳು ಕೂಡಲೇ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.


Spread the love

LEAVE A REPLY

Please enter your comment!
Please enter your name here