HomeGadag Newsಯುವಜನೋತ್ಸವ ಭವಿಷ್ಯದ ಮೈಲಿಗಲ್ಲಾಗಲಿ: ಡಾ. ಎಚ್.ಕೆ. ಪಾಟೀಲ

ಯುವಜನೋತ್ಸವ ಭವಿಷ್ಯದ ಮೈಲಿಗಲ್ಲಾಗಲಿ: ಡಾ. ಎಚ್.ಕೆ. ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಯುವ ಜನಾಂಗಕ್ಕೆ ಯುವಜನೋತ್ಸವ ಕೇವಲ ಮೋಜು-ಮಸ್ತಿಗಾಗಿ ಮಾತ್ರವಲ್ಲ, ಅದು ಅವರ ಉಜ್ವಲ ಭವಿಷ್ಯದ ಸೂಚಕ ಹಾಗೂ ಜೀವನ ಮೌಲ್ಯಗಳಿಗೆ ದಾರಿ ದೀಪವಾಗಬಲ್ಲದು ಎಂಬುದನ್ನು ಸಮಕಾಲೀನ ಯುವಪೀಳಿಗೆ ಅರ್ಥೈಸಿಕೊಂಡಾಗ ಯುವಜನೋತ್ಸವಕ್ಕೆ ಒಂದು ಸಾರ್ಥಕ್ಯ ಬರಲು ಸಾಧ್ಯ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗದಗ, ನಿಘ್ಹಾನ್ಸ್ ಬೆಂಗಳೂರು, ನೆಹರು ಯುವ ಕೇಂದ್ರ ಗದಗ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಗದಗ, ಲಯನ್ಸ್ ಶಿಕ್ಷಣ ಸಂಸ್ಥೆ ಗದಗ, ಸನ್ಮಾರ್ಗ ಪದವಿಪೂರ್ವ ಮಹಾವಿದ್ಯಾಲಯ ಗದಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸನ್ಮಾರ್ಗ ಕಾಲೇಜಿನಲ್ಲಿ ಜರುಗಿದ 2025ನೇ ಸಾಲಿನ ಯುವಜನೋತ್ಸವವನ್ನು ಉದ್ಘಾಟಿಸಿ ಸಚಿವೆರು ಮಾತನಾಡಿದರು.

ಜಿಲ್ಲೆಯಲ್ಲಿ ಯುವಕ ಮಂಡಳಗಳ ಸಂಖ್ಯೆಯನ್ನು ಹೆಚ್ಚಿಸುವ, ಹಾಗೆಯೇ ಅವುಗಳ ಮೂಲಕ ರಚನಾತ್ಮಕ ಚಟುವಟಿಕೆಗಳನ್ನು ಮಾಡುವ ಉದ್ದೇಶವಿದೆ. ಅದನ್ನು ಸಾರ್ಥಕಪಡಿಸುವಲ್ಲಿ ಯುವಜನ ಸಬಲೀಕರಣ ಇಲಾಖೆ ಪ್ರಯತ್ನ ಮಾಡಲಿ ಎಂದು ಸಚಿವೆರು ಆಶಿಸಿದರು.

ಭವ್ಯ ಭಾರತವನ್ನು ರೂಪಿಸುವ ಯುವಜನಾಂಗ ಮಾದಕ ವಸ್ತುಗಳತ್ತ ಆಕರ್ಷಿತರಾಗದೇ ಸನ್ಮಾರ್ಗದಲ್ಲಿ ನಡೆದಾಗ ಅವರ ಉಜ್ವಲ ಭವಿಷ್ಯ ಹಾಗೂ ರಾಷ್ಟ್ರದ ಉತ್ತೆನ ಸುಲಭ ಸಾಧ್ಯ ಎನ್ನುವ ತಮ್ಮ ಅಭಿಪ್ರಾಯಕ್ಕೆ ಸಾಕಷ್ಟು ಅಂಕಿ ಅಂಶಗಳನ್ನು ನೀಡುವ ಮೂಲಕ ಯುವಜನರ ಮನವನ್ನು ಪರಿವರ್ತಿಸುವ ಸಫಲ ಪ್ರಯತ್ನಗೈದರಲ್ಲದೆ, ಜಿಲ್ಲೆಯ ವಿಭಿನ್ನ ಭಾಗಗಳಿಂದ ಆಗಮಿಸಿದ ಸ್ಪರ್ಧಾಳುಗಳು ತಮ್ಮ ತಮ್ಮ ವಿಭಾಗಗಳಲ್ಲಿ ಯಶಸ್ಸನ್ನು ಪಡೆಯಲಿ ಎಂದು ಹಾರೈಸಿದರು.
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಜಿಲ್ಲ­ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಲಯನ್ಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಜೆ.ಸಿ. ಶಿರೋಳ, ಸಿದ್ದು ಪಾಟೀಲ, ಸಾವಿತ್ರಿ ಲಮಾಣಿ, ಶಂಕ್ರಣ್ಣ ಸಂಕಣ್ಣನವರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಗಣ್ಯರಾದ ರಾಜೇಶ್ ಕುಲಕರ್ಣಿ, ಎಂ.ಸಿ. ಹಿರೇಮಠ, ಪ್ರೇಮಾನಂದ ರೋಣದ, ಸಯ್ಯದ ಮತೀನ್ ಮುಲ್ಲಾ, ರೋಹಿತ ಒಡೆಯರ, ರಾಹುಲ್ ಒಡೆಯರ, ಪುನೀತ ದೇಶಪಾಂಡೆ, ಜಿ.ಬಿ. ಬೇವಿನಕಟ್ಟಿ, ರಾಜು ವರ್ಣೆಕರ, ರೇಣಕಾಪ್ರಸಾದ್ ಹಿರೇಮಠ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಅಂದಾನಯ್ಯ ವಿಭೂತಿ, ಎಚ್.ಎಸ್. ಸೋಂಪುರ, ಸಿದ್ದಣ್ಣ ಬಂಡಿ, ಹಬೀಬ್ ಹಾಜರಿದ್ದರು.
ಡಾ. ಶರಣು ಗೋಗೇರಿ ಸ್ವಾಗತಿಸಿದರು. ಮಹಮ್ಮದರ ಫೀ ಯರಗುಡಿ ಕಾರ್ಯಕ್ರಮ ನಿರೂಪಿಸಿದರೆ, ಪ್ರೊ. ಹೇಮಂತ ದಳವಾಯಿ ವಂದಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟಗಳ ಜಿಲ್ಲಾಧ್ಯಕ್ಷ ರವಿಕಾಂತ ಅಂಗಡಿ, ಯುವ ಕಲಾವಿದರಿಗೆ ಸೂಕ್ತ ಗೌರವ, ಪ್ರಶಸ್ತಿಗಳನ್ನು ದೊರಕಿಸಿಕೊಡುವಲ್ಲಿ ಸಚಿವರ ಸಹಾಯವನ್ನು ಆಪೇಕ್ಷಿಸುವುದರ ಜೊತೆಗೆ ಸಚಿವರ ಮಾರ್ಗದರ್ಶನ, ನಮ್ಮ ಸಮಾರಂಭಕ್ಕೆ ಅತ್ಯಂತ ಅಗತ್ಯ. ಆ ರೀತಿಯ ಸಹಾಯ, ಸಹಕಾರ ಯಾವತ್ತೂ ಇರಲಿ ಎಂದು ಆಶಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!