`ಕರಟಕ ದಮನಕ’ ಚಿತ್ರ ಶತದಿನೋತ್ಸವ ಆಚರಿಸಲಿ

0
vitala
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಡಾ. ಶಿವರಾಜ್‌ಕುಮಾರ ಹಾಗೂ ಪ್ರಭುದೇವ ಅಭಿನಯದ `ಕರಟಕ ದಮನಕ’ ಕನ್ನಡ ಚಲನಚಿತ್ರ ಗದುಗಿನ ಶ್ರೀಕೃಷ್ಣಾ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಅಖಿಲ ಕರ್ನಾಟಕ ಡಾ. ರಾಜಕುಮಾರ ಅಭಿಮಾನಿಗಳ ಸಂಘಗಳ ಒಕ್ಕೂಟ, ಡಾ. ಶಿವರಾಜಕುಮಾರ ಅಭಿಮಾನಿಗಳ ಸಂಘ, ರಾಜರತ್ನ ಪುನೀತರಾಜಕುಮಾರ ಅಭಿಮಾನಿಗಳ ಸಂಘಗಳ ಗದಗ ಜಿಲ್ಲಾ ಘಟಕದ ವತಿಯಿಂದ ಚಿತ್ರದ ಕಟೌಟ್‌ಗೆ ಹೂಮಾಲೆ ಹಾಕಿ ಪಟಾಕಿ ಸಿಡಿಸಿ, ಚಿತ್ರವು ಶತದಿನೋತ್ಸವ ಆಚರಿಸಲಿ ಎಂದು ಗದಗ ಜಿಲ್ಲಾಧ್ಯಕ್ಷ ವಿಠ್ಠಲ ಪರಾಪೂರ ಶುಭಾಶಯ ಕೋರಿದರು.

Advertisement

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಸಂಗಾಪೂರ, ರಾಘವೇಂದ್ರ ಪರಾಪೂರ, ಗಣೇಶ ಹುಬ್ಬಳ್ಳಿ, ನಾಗರಾಜ ಗುತ್ತಿ, ಮೇಘನಾ ಎಂ.ಕೊಟ್ಟೂರು, ಫಾತಿಮಾ ಹೊನ್ನಾಪೂರ, ಮಲ್ಲೇಶ ಪರಾಪೂರ, ಅಶೋಕ ಹೂಗಾರ, ಸ್ವಾತಿ ಅಕ್ಕಿ, ಮಂಜುಳಾ ಕಲಕೇರಿ, ರಾಜು ಅಗಸಿನಕೊಪ್ಪ, ಗಿರೀಶ, ವಿನಯ, ಗಣೇಶ, ಆಕಾಶ, ರಾ.ದೇ. ಕಾರಭಾರಿ, ಮೇರಿ ಕಾರಭಾರಿ ಸೇರಿದಂತೆ ಅಭಿಮಾನಿಗಳು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here