ವಿಜಯಸಾಕ್ಷಿ ಸುದ್ದಿ, ಗದಗ : ಸಮಾಜಮುಖಿ, ಜನಮುಖಿ ಕಾರ್ಯ ಮಾಡುವಲ್ಲಿ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಯಾವಾಗಲೂ ಮುಂದೆ ಇದೆ. ನಾವೆಲ್ಲರೂ ಸೇರಿ ಉತ್ತಮ ಕಾರ್ಯ ಮಾಡೋಣ ಎಂದು ರೋಟರಿ ಕ್ಲಬ್‌ನ ಅಸಿಸ್ಟಂಟ್ ಗವರ್ನರ್ ಶಿವಾಚಾರ್ಯ ಹೊಸಳ್ಳಿಮಠ ಹೇಳಿದರು.
ಅವರು ಗದಗ ರೋಟರಿ ಸೆಂಟ್ರಲ್ ಸಂಸ್ಥೆಯ ಕ್ಲಬ್ ಅಸೆಂಬ್ಲಿಯಲ್ಲಿ ಮಾತನಾಡಿ, 2024-25ನೇ ಸಾಲಿನ ಅಧಿಕಾರದ ಅವಧಿಯಲ್ಲಿ ಕ್ಲಬ್‌ನ ನಿರ್ದೆಶಕರು, ಪದಾಧಿಕಾರಿಗಳು ಕಾರ್ಯಯೋಜನೆಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನಗೊಳಿಸೋಣ. ಕ್ಲಬ್‌ನ ನಿರ್ದೇಶಕರು ಬಜೆಟ್ ಮಂಡನೆ ಮಾಡಿದ್ದು, ಇದರಲ್ಲಿ ಸಮಾಜಕ್ಕೆ ಉಪಯುಕ್ತವಾದ ಮತ್ತು ಜನರಿಗೆ ತಲುಪಬಹುದಾದ ಕಾರ್ಯಗಳನ್ನು ಸಾಕಾರಗೊಳಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಗದಗ ರೋಟರಿ ಸೆಂಟ್ರಲ್ ಕ್ಲಬ್ ಅಧ್ಯಕ್ಷ ಆರ್.ಬಿ. ದಾನಪ್ಪಗೌಡರ ಮಾತನಾಡಿ, 2024-25ನೇ ಸಾಲಿಗೆ ವಿಶೇಷ ಹಾಗೂ ವಿಭಿನ್ನ ಕಾರ್ಯಯೋಜನೆಗಳನ್ನು ರೂಪಿಸಲಾಗಿದ್ದು ಅವುಗಳನ್ನು ಸಾಕಾರಗೊಳಿಸಲು ಸರ್ವ ಪದಾಧಿಕಾರಿಗಳ, ಸದಸ್ಯರ ಸಹಕಾರ ಅವಶ್ಯ ಎಂದರು.
ಗದಗ ರೋಟರಿ ಸೆಂಟ್ರಲ್ ಖಜಾಂಚಿ ರಾಜು ಉಮನಾಬಾದಿ ಬಜೆಟ್ ಮಂಡಿಸಿದರು. ನಿರ್ದೇಶಕರಾದ ಪ್ರಕಾಶ ಉಗಲಾಟದ ಕುಮಾರ ಹಿರೇವಡೆಯರ್, ಎಂ.ಸಿ. ಬೇಲೇರಿ, ಎಂ.ಸಿ. ಐಲಿ, ಎಂ.ಎಂ. ಬಡ್ನಿ ಕ್ಲಬ್‌ನ ವಿವಿಧ ಜವಾಬ್ದಾರಿ ಹಾಗೂ ಯೋಜನೆಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಸುರೇಶ ಅಬ್ಬಿಗೇರಿ, ಎಸ್.ಆಯ್. ಅಣ್ಣಿಗೇರಿ, ವ್ಹಿ.ಕೆ. ಗುರುಮಠ, ಮಧು ಪುಣೇಕರ, ಸುನೀಲ ರಮಣಿ, ರಾಜು ಕುರಡಗಿ, ಶ್ರೀಕಾಂತ ಲಕ್ಕುಂಡಿ, ಕೆ.ವ್ಹಿ. ಪಾಟೀಲ, ಟಿ.ಎಸ್. ಪಾಟೀಲ, ಚಂದಪ್ಪನವರ, ವೀರನಗೌಡ ಚಂದ್ರಗೌಡ್ರ, ಶಶಿಧರ ದಿಂಡೂರ, ವಿಜಯಕುಮಾರ ಹಿರೇಮಠ, ರಾಜು ಗುಡಿಮನಿ ಉಪಸ್ಥಿತರಿದ್ದರು. ಕ್ಲಬ್‌ನ ಕಾರ್ಯದರ್ಶಿ ಸಿ.ಜಿ. ಹಿರೇಗೌಡರ ವಂದಿಸಿದರು.