ವಿಜಯಸಾಕ್ಷಿ ಸುದ್ದಿ, ಬೆಂಗಳೂರು/ಗದಗ: ಅಖಿಲ ಕರ್ನಾಟಕ ಮೋಚಿಗಾರ ಸಂಘದ ಸಮಸ್ತ ಬಾಂಧವರ ಉಪಸ್ಥಿತಿಯಲ್ಲಿ ಜ.31ರೊಳಗಾಗಿ 2 ಲಕ್ಷ ಮೋಚಿಗಾರ ಸಮಾಜ ಬಾಂಧವರು ಒಟ್ಟಾಗಿ ಕೂಡಿಕೊಂಡು ಒಳ ಮೀಸಲಾತಿ ಅನುಷ್ಠಾನಕ್ಕೆ ಒತ್ತಾಯಿಸಿರುವ ಅಭಿಪ್ರಾಯಗಳ ಮನವಿ ಪತ್ರವನ್ನು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಅವರಿಗೆ ಸಲ್ಲಿಸೋಣ. ಅಖಿಲ ಕರ್ನಾಟಕ ಮೋಚಿಗಾರ ಸಂಘದ ರಾಜ್ಯಾಧಕ್ಷರಾಗಿ ಮೋಚಿಗಾರ ಸಮಾಜವನ್ನು ಸಂಘಟಿಸಿ, ಬಲಿಷ್ಠಗೊಳಿಸಿ, ಸಮಾಜವನ್ನು ಪ್ರಗತಿಯತ್ತ ಕೊಂಡಯ್ಯುತ್ತಿರುವ ಶಿವಪ್ಪ ಮುಳಗುಂದ ಅವರೇ ಮುಂದುವರೆಯಲಿ ಎಂದು ನಿವೃತ್ತ ಉಪ ಪೊಲೀಸ್ ಆಯುಕ್ತರಾದ ಬಸವರಾಜ ಮಾಲಗತ್ತಿ ಹೇಳಿದರು.
ವಿಜಯನಗರದಲ್ಲಿರುವ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಮೋಚಿಗಾರ ಸಂಘದ ನೂತನ ಸಭಾಭವನ ಹಾಗೂ ಸಮಾಜ ಬಾಂಧವರ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯಾದ್ಯಂತ ಮೋಚಿಗಾರ ಸಮಾಜ ಬಾಂಧವರು 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಸಮಗಾರ, ಡೋರ ಮತ್ತು ಮೋಚಿಗಾರ ಸಂಘಟನೆಯ ತ್ರಿಮಸ್ಥ ಸಮುದಾಯ 19 ಲಕ್ಷಕ್ಕೂ ಅಧಿಕ ಬಾಂಧವರಿದ್ದಾರೆ. ತ್ರಿಮತಸ್ಥ ಬದಲಿಗೆ ಮೋಚಿಗಾರ ಬಾಂಧವರ ಬೆಂಬಲದಿಂದ ಒಳಮೀಸಲಾತಿಗಾಗಿ ಹೋರಾಡೋಣ. ಜ. 31ರೊಳಗಾಗಿ ನಿ. ನ್ಯಾಯಮೂರ್ತಿ ನಾಗಮೋಹನದಾಸ ಅವರಿಗೆ ಸಮುದಾಯ ಬಾಂಧವರಿAದ ಸಂಗ್ರಹಿಸಿರುವ ಅಬಿಪ್ರಾಯಗಳ ವರದಿಯನ್ನು ನೀಡಿ ಒತ್ತಾಯಿಸೋಣ. ಜೊತೆಗೆ ಮೋಚಿಗಾರ ಸಮುದಾಯದ ಗುರು ಆಯ್ಕೆ ಕುರಿತಂತೆ ತಮ್ಮ ಜಿಲ್ಲೆಗಳಲ್ಲಿ ಗುರು ಅರ್ಹತೆ ವ್ಯಕ್ತಿತ್ವ ಹೊಂದಿರುವವರ ಮಾಹಿತಿ ಸಂಗ್ರಹಿಸಿ ರಾಜ್ಯದ ಕೇಂದ್ರ ಕಾರ್ಯಾಲಯಕ್ಕೆ ರವಾನಿಸಿ, ಚರ್ಚಿಸಿ, ನಿರ್ಣಯ ಕೈಗೊಳ್ಳೋಣ ಎಂದರು.
ಸಂಘದ ರಾಜ್ಯ ಉಪಾಧ್ಯಕ್ಷ ಆರ್.ಕೆ. ಸುರಪುರ ಸಾಚಿದರ್ಭಿಕವಾಗಿ ಮಾತನಾಡಿದರು. ಬಿ.ಆರ್. ರಾವ್ ಮಾತನಾಡಿ, ಸಮುದಾಯ ಭವನದ ಕಾಮಗಾರಿಗಾಗಿ 4 ಲಕ್ಷ ರೂ ನೀಡುವ ಘೋಷಣೆ ಮಾಡಿದರು.
ವೇದಿಕೆಯ ಮೇಲೆ ಆಸ್ತಿ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ವರಿಷ್ಠಾಧಕಾರಿ ಬಿ.ಎಸ್. ಮರತೂರಕರ, ರಾಜ್ಯ ಉಪಾಧ್ಯಕ್ಷೆ ಶ್ರೀದೇವಿ ಬಿ.ಮರತೂರಕರ, ಆರ್.ಕೆ. ಸುರಪುರ, ಮಲ್ಲೇಶಪ್ಪ ಬಂಕಾಪೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ ಕೆಂಭಾವಿ, ರಾಜ್ಯ ಕಾರ್ಯ ನಿರ್ವಾಹಕ ನಿರ್ದೇಶಕ ಎಮ್.ಬಿ. ಇನಾಮದಾರ, ರಾಜ್ಯ ಸಂಘಟನಾ ಕಾರ್ಯದರ್ಶಿ ಶಂಕ್ರರಪ್ಪ ರೋಣದ, ರಾಜ್ಯ ಸ. ಕಾರ್ಯದರ್ಶಿ ಎಚ್.ಎಸ್. ಸ್ವಾಮಿ, ಸತ್ಯನಾರಾಯಣ ನಿಡಗಲ್, ರಾಜ್ಯ ಖಜಾಂಚಿ ರಾಮಚಂದ್ರಪ್ಪ ಅಡ್ಡೇದಾರ, ಆಂತರಿಕ ಲೆಕ್ಕ ಪರಿಶೋಧಕ ಮಾಲತೇಶ ಮೈಸೂರು, ಖಾಯಂ ಆಹ್ವಾನಿತ ಸದಸ್ಯರಾದ ನವಲಗುಂದ ಯಲ್ಲಪ್ಪ, ಕೆ.ವ್ಹಾಯ್. ಕೊಪ್ಪರಕರ, ನಾಗರತ್ನ ಶಿವಪ್ಪ ಮುಳಗುಂದ, ಹನುಮಂತಪ್ಪ ಬಂಕಾಪೂರ, ಮಹಾದೇವ ಸ್ವಾದಿ, ರವಿ ಗೌಡರ, ಎಚ್.ವ್ಹಾಯ್. ಮಹಾದೇವ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಗೌರಯ್ಯ, ಗಲ್ಬುರ್ಗಾ ಜಿಲ್ಲಾಧ್ಯಕ್ಷ ಕಾಶಿರಾಯ ನಂದೂರಕರ, ಬೀಮರಾಜ ದೇಗಲಮಡಿ, ಚಂದ್ರಶೇಖರ ದೇಗಲಮಡಿ, ಎಸ್.ರಾಜಣ್ಣ, ನಾರಾಯಣ ಕಲಬುರ್ಗಿ, ಮಲ್ಲಿಕಾರ್ಜುನ ಜಿರಟ್ಟಿ, ಉಮೇಶ ನರಗುಂದ, ಪ್ರಶಾಂತ ನರೇಂದ್ರ, ಸಿದ್ದಣ್ಣ ಭಾವಿಮನಿ, ದೊಡ್ಡಮನಿ, ದಾನಪ್ಪ ಕವಲೂರು, ವೀರಣ್ಣ ತಾವರಗೇರಿ, ಮಂಜಪ್ಪ ದರಗದಕಟ್ಟಿ, ದಾನಪ್ಪ ಕವಲೂರು, ವಿರೂಪಾಕ್ಷ ಮೈಸೂರು, ಮಂಜುನಾಥ ಮೈಸೂರು, ಮೋಹನ ಗೌಡರ, ಅರ್ಜುನಪ್ಪ ಸಂದಿಮನಿ, ಶಿವಾನಂದ ಗೌಡರ, ವಿರೂಪಾಕ್ಷಪ್ಪ ದೊಡ್ಡಮನಿ, ಬಸವರಾಜ ಕರ್ಜಗಿ, ಲಕ್ಷö್ಮಣ ದಿಗ್ಗಾವಿ, ಅಶೋಕ ಮೈಸೂರ, ರೇವಣ್ಣ ಕಡೇಮನಿ, ವಿರೂಪಾಕ್ಷಪ್ಪ ದೊಡ್ಡಮನಿ, ಬಸವರಾಜ ಬೆಂಡಿಗೇರಿ, ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾಧ್ಯಕರು, ಪದಾಧಿಕಾರಿಗಳು ಹಾಗೂ ಸಮುದಾಯ ಬಾಂಧವರಿದ್ದರು.
ಸಮುದಾಯದ ಯುವ ಬಾಂಧವ ಮಂಜುನಾಥ ಎಸ್.ಮುಳಗುಂದ ಅವರು ನಿರೂಪಿಸಿದರು.
ಸಂಘದ ರಾಜ್ಯಾಧ್ಯಕ್ಷ ಶಿವಪ್ಪ ಮುಳಗುಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಖಿಲ ಕರ್ನಾಟಕ ಮೋಚಿಗಾರ ಸಂಘದ ರಾಜ್ಯಾಧ್ಯಕ್ಷನಾಗಿ ಕಳೆದ 20 ವರ್ಷಗಳಿಂದ ಸಮಾಜ ಸಂಘಟನೆಯೊAದಿಗೆ ಸಮುದಾಯ ಭವನವನ್ನು ಹಂತ ಹಂತವಾಗಿ ನಿರ್ಮಿಸಿರುವ ತೃಪ್ತಿ ನನಗಿದೆ. ಮೋಚಿಗಾರ ಸಮುದಾಯ ಭವನದ ಆಸ್ತಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಬಸವರಾಜ ಮಾಲಗಿತ್ತಿ ಹಾಗೂ ಡಾ. ಬಿ.ಎಸ್. ಮರತೂರಕರ ನೇತೃತ್ವದ ಸಮಸ್ತ ಅಖಿಲ ಕರ್ನಾಟಕ ಮೋಚಿಗಾರ ಸಮುದಾಯದ ಬೆಂಬಲದ ಸಹಕಾರ ನನಗಿದ್ದರೆ ಮತ್ತೆ ಹೊಣೆಯನ್ನು ನಿರ್ವಹಿಸಲು ನಾನು ಸಿದ್ಧನಿದ್ದೇನೆ. ಮೋಚಿಗಾರ ಸಮಾಜವನ್ನು ರಾಜ್ಯಮಟ್ಟದಲ್ಲಿ ಬಲಿಷ್ಠವಾಗಿ ಕಟ್ಟಲು ನಾನು ಉತ್ಸುಕನಾಗಿದ್ದೇನೆ ಎಂದರು.



