ಕನ್ನಡ ಹೋರಾಟಗಾರರನ್ನು ಸ್ಮರಿಸೋಣ : ಡಾ. ಬಸವರಾಜ್

0
Let's remember Kannada fighters
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಧ್ವಜಾರೋಹಣ ಮತ್ತು ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಕುಟುಂಬ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

Advertisement

ಡಾ. ಬಸವರಾಜ್ ಧಾರವಾಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡಕ್ಕಾಗಿ ಹೋರಾಡಿದ ನಮ್ಮ ಗದುಗಿನ ಹೋರಾಟಗಾರರನ್ನು ನಾವೆಲ್ಲರೂ ನೆನಪು ಮಾಡಿಕೊಳ್ಳಬೇಕಿದೆ. ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ್ರು ನೇತೃತ್ವದಲ್ಲಿ ಕನ್ನಡ ನಾಡಿಗಾಗಿ ಹಲವಾರು ಯಶಸ್ವಿ ಹೋರಾಟಗಳನ್ನು ಮಾಡಿದ್ದಾರೆ.

ರಾಜ್ಯೋತ್ಸವದ ಪ್ರಯುಕ್ತ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ನೇತೃತ್ವವನ್ನು ಕರವೇ ಗದಗ ಜಿಲ್ಲಾ ಗೌರವಾಧ್ಯಕ್ಷ ನಿಂಗನೂರ ಎಸ್.ಮಾಲಿಪಾಟೀಲ್ ವಹಿಸಿಕೊಂಡಿದ್ದರು. ಹಿತೈಷಿಗಳಾದ ಡಾ. ಜಯಕುಮಾರ್ ಬ್ಯಾಳೆ ಮತ್ತು ಸಿದ್ದು ಅಂದನಗೌಡ್ರು, ಎಸ್.ಎಸ್. ಪಾಟೀಲ್, ಕರವೇ ಜಿಲ್ಲಾ ಉಪಾಧ್ಯಕ್ಷ ಮಾರುತಿ ಈಳಿಗೇರ, ವಿನಾಯಕ್ ಬದಿ, ಕರವೇ ಮಹಿಳಾ ಜಿಲ್ಲಾ ಮುಖಂಡರಾದ ರತ್ನಮ್ಮ ಯಲಬುರ್ಗಿ, ತಾಲೂಕಾ ಉಪಾಧ್ಯಕ್ಷ ದಾವಲ್‌ಸಾಬ್ ತಹಸೀಲ್ದಾರ್, ಕಾರ್ಮಿಕ ಘಟಕದ ಕಾರ್ಯದರ್ಶಿ ತೌಶಿಫ್ ಡಾಲಾಯತ್, ನಿಯಾಜ್ ಮುಳುಗುಂದ, ಶಬೀರ್‌ಸಾಬ್, ಯುವ ಮುಖಂಡರಾದ ರಾಹುಲ್ ತೆರದಾಳ್, ರಘು ಹಟ್ಟಿ, ಮಹೇಶಗೌಡ ಮಾಲಿ ಪಾಟೀಲ್, ರಾಜಶೇಖರ್ ಭೀಮನಗೌಡ ಮಾಲಿಪಾಟೀಲ್ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here