ಪತ್ರಕರ್ತರ ನೋವು-ನಲಿವಿಗೆ ಜೊತೆಯಾಗೋಣ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಗ್ರಾಮೀಣ ಪತ್ರಕರ್ತರ ಸಮಸ್ಯೆಗಳ ಪರಿಹಾರಕ್ಕೆ ಮೊದಲ ಆದ್ಯತೆ ನೀಡಲು ಶ್ರಮಿಸುವೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ರಾಜು ಹೆಬ್ಬಳ್ಳಿ ಹೇಳಿದರು.

Advertisement

ಅವರು ಮುಳಗುಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮುಳಗುಂದ ಕಾರ್ಯನಿರತ ಪತ್ರಕರ್ತ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರತಿಯೊಬ್ಬ ಪತ್ರಕರ್ತರು ಗ್ರಾಮೀಣ ಭಾಗದಿಂದ ಬಂದವರು. ಇಂದು ಪತ್ರಕರ್ತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ನೋವು-ನಲಿವಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಅವರ ಜೊತೆ ಇರುತ್ತೇವೆ ಎಂದರು.

ಉಪಾಧ್ಯಕ್ಷ ಪ್ರಭಯ್ಯ ಅರವಟಗಿಮಠ ಮಾತನಾಡಿ, ಇಂದು ಗ್ರಾಮೀಣ ಭಾಗದ ಪತ್ರಕರ್ತರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿರುವ ನಿತ್ಯ ಕಾಯಕ ಯೋಗಿಗಳು. ಅವರ ಅಭಿವೃದ್ಧಿಗಾಗಿ ಸಂಘ ಎಂದಿಗೂ ಅವರ ಜೊತೆ ಇರುತ್ತದೆ ಎಂದರು.

ಪತ್ರಕರ್ತರಾದ ಶಿವಾನಂದ ಹಿರೇಮಠ, ವಿರೂಪಾಕ್ಷಪ್ಪ ಕಣವಿ, ಶರಣು ದೊಡ್ಡೂರ, ಅನಿಲ ತೆಂಬದಮನಿ, ಅರುಣ ಹಿರೇಮಠ, ಚಂದ್ರು ಕುಸ್ಲಾಪೂರ ಅವರನ್ನು ಸನ್ಮಾನಿಸಲಾಯಿತು. ಚಂದ್ರು ಭಜಂತ್ರಿ, ಮಹೇಶ ನೀಲಗುಂದ, ರಾಜು ಪಾಟೀಲ, ಬಿ.ಎಲ್. ಜಾಧವ, ಮಹೇಶ ಛಬ್ಬಿ, ವಿ.ಡಿ. ಸಿದ್ದನಗೌಡರ ಇದ್ದರು.


Spread the love

LEAVE A REPLY

Please enter your comment!
Please enter your name here