ನವ ಭಾರತದ ನಿರ್ಮಾಣಕ್ಕಾಗಿ ಒಂದಾಗೋಣ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸ್ವತಂತ್ರ ರಾಷ್ಟ್ರಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ವೀರರಾಣಿ ಕಿತ್ತೂರ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಂತಹ ಹೋರಾಟಗಾರರ, ಮಹನೀಯರ ಸ್ಮರಣೆಯೊಂದಿಗೆ ನವ ಭಾರತದ ನಿರ್ಮಾಣಕ್ಕಾಗಿ ಜಾತಿ, ಧರ್ಮ ಮೀರಿ ಎಲ್ಲರೂ ಸಹೋದರರಂತೆ ಮುನ್ನಡೆಯುವ ಸಂಕಲ್ಪದಿ ಹೆಜ್ಜೆ ಹಾಕೋಣ ಎಂದು ಕಾಂಗ್ರೆಸ್ ನಾಯಕ ಗುರುನಾಥ ದಾನಪ್ಪನವರ ಹೇಳಿದರು.

Advertisement

ಅವರು ಶುಕ್ರವಾರ ಸ್ವಾತಂತ್ರ್ಯೋತ್ಸವದ ನಿಮಿತ್ತ ಪಟ್ಟಣದ ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರ ರಾಣಿ ಚನ್ನಮ್ಮನ ಪುತ್ಥಳಿಗೆ ಹೂಮಾಲೆ ಸಮರ್ಪಿಸಿ ಮಾತನಾಡಿದರು.

ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಜನರನ್ನು ಜಾಗೃತಗೊಳಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೀರ್ತಿ ಕಿತ್ತೂರು ರಾಣಿ ಚನ್ನಮ್ಮಳ ಭಂಟ ರಾಯಣ್ಣನವರಿಗೆ ಸಲ್ಲುತ್ತದೆ. ರಾಯಣ್ಣನ ದೇಶಭಕ್ತಿ ಎಲ್ಲರಲ್ಲಿ ಬೆಳೆದು ಬರಬೇಕು, ಅಂತಹ ದೇಶಭಕ್ತರು ಈ ನಾಡಿನಲ್ಲಿ ಜನಿಸುವಂತಾಗಬೇಕು. ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಸುಸಂಸ್ಕೃತ ಭಾರತದಲ್ಲಿ ಎಲ್ಲರೂ ಹಕ್ಕುಗಳ ಪ್ರತಿಪಾದನೆಯ ಜೊತೆಗೆ ಕರ್ತವ್ಯಗಳನ್ನು ಮರೆಯದೇ ಪಾಲಿಸಬೇಕು ಎಂದರು.

ಈ ವೇಳೆ ಫಕ್ಕಿರೇಶ ಮ್ಯಾಟಣ್ಣವರ, ತಿಪ್ಪಣ್ಣ ಸಂಶಿ, ನವೀನ ಬೆಳ್ಳಟ್ಟಿ, ಈರಣ್ಣ ಪೂಜಾರ, ಬಸವರಾಜ ಹಿರೇಮನಿ, ಮಂಜು ಮುಳಗುಂದ, ಬಸವರಾಜ ಚರ್ಕಸಾಲಿ, ಸುರೇಶ ಹಟ್ಟಿ, ಭರಮಪ್ಪ ಶರಸೂರಿ, ಮುತ್ತು ಕರ್ಜೆಕಣ್ಣವರ, ನವೀನ ಕುಂಬಾರ, ಶಿವು ಒಂಟಿಪಡಿಯಪ್ಪನವರ, ಪ್ರಾಣೇಶ ವ್ಯಾಪಾರಿ, ಚಂದ್ರು ಕರ್ಜೆಕಣ್ಣವರ ಸೇರಿ ಅನೇಕರಿದ್ದರು.


Spread the love

LEAVE A REPLY

Please enter your comment!
Please enter your name here