ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಪು.ಬಡ್ನಿ ಗ್ರಾಮದಲ್ಲಿ ಅಂದಾಜು 12.60 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಶಾಸಕ ಡಾ. ಚಂದ್ರು ಲಮಾಣಿ ಶನಿವಾರ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಗ್ರಂಥಾಲಯಗಳು ಜ್ಞಾನಭಂಡಾರಗಳು. ಇವುಗಳಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯೋಗವಿದೆ. ಓದುವ ಹವ್ಯಾಸ ಬೆಳೆಸಿಕೊಳ್ಳುವದರಿಂದ ಹೆಚ್ಚು ಜ್ಞಾನ ಸಂಪಾದಿಸಲು ಸಾಧ್ಯವಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಗ್ರಂಥಾಲಯಗಳು ಅತ್ಯಗತ್ಯ. ಜ್ಞಾನಾರ್ಜನೆಗೆ ಗ್ರಂಥಾಲಯಗಳು ಉತ್ತಮ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಹಲವಾರು ಗ್ರಾಮಗಳಲ್ಲಿ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಗ್ರಾಮದಲ್ಲಿ ಗ್ರಂಥಾಲಯಗಳು ಇದ್ದರೆ ದೇವಸ್ಥಾನ ನಿರ್ಮಾಣವಾದಂತೆ. ವಿದ್ಯಾರ್ಥಿಗಳು, ವೃದ್ಧರು, ಗೃಹಿಣಿಯರು ಗ್ರಂಥಾಲಯಗಳಲ್ಲಿ ಕುಳಿತು ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ವೃದ್ಧಿಸಿಕೊಂಡು ಬಾಳಬಹುದು ಎಂದು ಸಲಹೆ ನೀಡಿದ ಅವರು, ಪುಸ್ತಕವನ್ನು ನೀವು ಶ್ರದ್ಧೆಯಿಂದ ತಲೆ ಬಾಗಿಸಿ ಓದಿದರೆ ಜೀವನದಲ್ಲಿ ನಿಮ್ಮನ್ನು ತಲೆ ಎತ್ತಿ ನಡೆಯುವಂತೆ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರೇಮಕ್ಕ ಮಾದರ, ಶಾಂತವ್ವ ಬಟಗುರ್ಕಿ, ಅಶೋಕ ಬಟಗುರ್ಕಿ, ಸುಭಾಸ ಬಟಗುರ್ಕಿ, ಮುತ್ತಣ್ಣ ಚೋಟಗಲ್, ಶಿವಪುತ್ರಪ್ಪ ಚೋಟಗಲ್, ರಾಜು ಚೋಟಗಲ್, ಶ್ರೀಕಾಂತ ಚೋಟಗಲ್, ವಾಗೀಶ ಬಟಗುರ್ಕಿ, ಅಶೋಕ ಯಲವಿಗಿ, ಪರಶುರಾಮ ಯಲವಿಗಿ, ಪ್ರಶಾಂತಗೌಡ ಪಾಟೀಲ್, ಶಿವಾನಂದ ಮಾದರ, ಕುಮಾರ ಬೂದಿಹಾಳ, ಶೇಖಣ್ಣ ಕರಣ್ಣವರ್, ಹೊಳಲಪ್ಪ ಕರಣ್ಣವರ್, ಶಿವಶರಣಪ್ಪ ಚೋಟಗಲ್, ಶಂಭು ಕರಣ್ಣವರ್, ಶಿವಪ್ಪ ಕೊರಕನವರ್ ಮುಂತಾದವರಿದ್ದರು.



