ಎಲ್‌ಐಸಿ ವಿಮಾ ಸಪ್ತಾಹದ ಸಮಾರೋಪ

0
module: NormalModule; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 73.0;
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಸರ್ಕಾರ ಎಲ್‌ಐಸಿ ವೈಯಕ್ತಿಕ ಜೀವ ವಿಮೆ ಹಾಗೂ ವೈಯಕ್ತಿಕ ಆರೋಗ್ಯ ವಿಮಾ ಯೋಜನೆಗಳಿಗೆ ಜಾರಿಗೆ ತಂದಿದ್ದ ಶೇ. 18 ಜಿಎಸ್‌ಟಿ ತೆರಿಗೆಯಿಂದ ಮುಕ್ತ ಮಾಡಿದೆ ಎಂದು ಎಲ್‌ಐಸಿ ಗದಗ 1ನೇ ಶಾಖೆಯ ಮ್ಯಾನೇಜರ್ ಎಚ್.ಎಂ. ಭಜಂತ್ರಿ ವಿವರಿಸಿದರು.

Advertisement

ಅವರು ಗದಗ ನಗರದ ಭಾರತೀಯ ಜೀವವಿಮಾ ನಿಗಮ ಗದಗ 1ನೇ ಶಾಖೆಯಲ್ಲಿ 69ನೇ ವರ್ಷಾಚರಣೆ ಅಂಗವಾಗಿ ನಡೆದ ವಿಮಾ ಸಪ್ತಾಹದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಗದಗ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಮಂಗಳಾ ಬಿ .ತಾಪಸ್ಕರ ಪಾಲ್ಗೊಂಡು ಎಲ್‌ಐಸಿ ವಿಮಾ ಸಂಸ್ಥೆಯ ಕಾರ್ಯ ವೈಖರಿಗಳನ್ನು ಶ್ಲಾಘಿಸಿದರು. ಉಪ ಶಾಖಾಧಿಕಾರಿ ವಿಕ್ರಮ್ ಶೀಲವಂತರ ವಿಜೇತರಿಗೆ ಬಹುಮಾನವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ವಿಮಾ ಸಿಬ್ಬಂದಿಗಳಾದ ಜಿ.ಎಚ್. ತಳವಾರ, ಭಾರತಿ ದೇಶಪಾಂಡೆ, ಸುಪ್ರೀತಾ, ಪ್ರತಿನಿಧಿಗಳಾದ ಬಿ.ಆರ್. ಕುಲಕರ್ಣಿ, ಸೋಮು ಲಮಾಣಿ, ವೀರಯ್ಯ ಎಂ.ಹೀರೆಮಠ, ಡಿ.ಸಿ. ಜವಳಿ, ಯಲ್ಲಪ್ಪ ಎಚ್.ಬಾಬರಿ, ಭರಮಪ್ಪ ಸಾಲಿ, ಈಶಪ್ಪ ನಾಲ್ಕುಕುರಿವಿ, ಶಿವಾನಂದ ಬಳಿಗಾರ, ರಮೇಶ ಕಲಾಲ, ರಾಜು ಗಾಣಗೇರ, ಜಗದೀಶ್ ಗೌಡ್ರು, ಕೆ.ಪಿ. ಅಳವುಂಡಿ, ಈರಣ್ಣ ದೋಟಿಕಲ್ಲ, ಪ್ರಶಾಂತ ಹಟ್ಟಿ, ಮಂಜುಳಾ ಇಟಗಿ, ರಾಜೇಶ್ವರಿ ಕಲಾಲ, ಜ್ಯೋತಿ ಹಾನಗಲ್ ಸೇರಿದಂತೆ ಸಿಬ್ಬಂದಿ ವರ್ಗದವರು ಮತ್ತು ಪ್ರತಿನಿಧಿಗಳು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here