ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರಪಂಚದಲ್ಲೇ ಉತ್ತಮ ಹಣಕಾಸಿನ ವ್ಯವಹಾರವನ್ನು ಹೊಂದಿರುವ ಹಾಗೂ ಜನಸಾಮಾನ್ಯರಿಗೆ ಕ್ಷಿಪ್ರಗತಿಯಲ್ಲಿ ಹಣ ಸಂದಾಯ ಮಾಡುವ ಏಕೈಕ ಸಂಸ್ಥೆ ಎಂದರೆ ಭಾರತೀಯ ಜೀವ ವಿಮಾ ನಿಗಮ ಎಂದು ಭಾರತೀಯ ಜೀವ ವಿಮಾ ನಿಗಮ ಸಂಪರ್ಕ ಶಾಖೆಯ ಶಾಖಾ ವ್ಯವಸ್ಥಾಪಕ ಜಿ. ಸುಧೀರಕುಮಾರ ಹೇಳಿದರು.
ಅವರು ಪಟ್ಟಣದ ಸಂಪರ್ಕ ಶಾಖಾ ಕಚೇರಿಯಲ್ಲಿ ಎಲ್‌ಐಸಿಯ 69ನೇ ವಾರ್ಷಿಕೋತ್ಸವದ ನಿಮಿತ್ತ ಪಾಲಿಸಿದಾರರೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್‌ಐಸಿ ಗ್ರಾಮೀಣಮಟ್ಟದಲ್ಲಿ ಪ್ರತಿನಿಧಿಗಳನ್ನು ನೇಮಕ ಮಾಡಿ ಲಕ್ಷಾಂತರ ಜನರಿಗೆ ಉದ್ಯೋಗ ದೊರಕಿಸಿಕೊಟ್ಟಿದೆ. ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತ ಪ್ರತಿನಿಧಿಯಾಗಿ ಅನೇಕರು ಜೀವನ ಕಂಡುಕೊಂಡಿದ್ದಾರೆ. ಇತ್ತೀಚೆಗೆ ದೇಶದ ಪ್ರಧಾನ ಮಂತ್ರಿಗಳು ಮಹಿಳೆಯರಿಗಾಗಿ ಬಿಮಾಸಕಿ ಯೋಜನೆಯನ್ನು ಜಾರಿಗೆ ತಂದಿದ್ದು, 1 ಲಕ್ಷ ಮಹಿಳೆಯರಿಗೆ ಉದ್ಯೋಗ ನೀಡಿದೆ. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರನ್ನಾಗಿಸುವ ಉದ್ದೇಶ ಹೊಂದಿದೆ. ದೇಶದಲ್ಲಿ ಒಟ್ಟು 30 ಕೋಟಿಗಿಂತ ಹೆಚ್ಚು ಪಾಲಿಸಿದಾರರು ಇದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಶರಣಪ್ಪ ಎಂ.ಬಿ, ಆನಂದ ಶಿರಗುಪ್ಪಿ, ಅರ್ಜುನ ಹುಲ್ಲಣ್ಣವರ, ತೇಜಸ್ ಶಾಸ್ತ್ರೀ, ಆಡಳಿತ ಅಧಿಕಾರಿಗಳಾದ ಸಂಗೀತಾ ವೇರ್ಣೇಕರ, ಅಬ್ದುಲ್ ಹಕ್, ಪ್ರತಿನಿಧಿಗಳಾದ ಶಿವಾನಂದ ವಡಕಣ್ಣವರ, ಗುರುನಾಥ ಮರಾಠೆ, ಸುರೇಶ್ ಹರ್ತಿ ಮಾರುತಿ ಭಜಂತ್ರಿ, ಮಾಸ್ತನಅಲಿ, ಸಿಬ್ಬಂದಿ ರವಿ ಏಳುಮಗ್ಗದ ಇದ್ದರು.


