ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೇವಸ್ಥಾನಗಳು ಮನುಷ್ಯರಲ್ಲಿ ಶೃದ್ಧೆ, ಭಕ್ತಿ, ಧರ್ಮಮಾರ್ಗ ತೋರುವ ದೀವಿಗೆ ಮತ್ತು ಶಕ್ತಿ ಕೇಂದ್ರಗಳಾಗಿವೆ ಎಂದು ಬಾಲೆಹೊಸೂರು/ಶಿರಹಟ್ಟಿಯ ಫಕ್ಕೀರೇಶ್ವರ ಸಂಸ್ಥಾನ ಮಠದ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ಹೇಳಿದರು.
ಅವರು ಶನಿವಾರ ತಾಲೂಕಿನ ಬಾಲೆಹೊಸೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಉತ್ತರಾಭಿಮುಖಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಲೋಕಾರ್ಪಣೆ ನಿಮಿತ್ತ ನಡೆದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಣ, ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಗ್ರಾಮೀಣ ಭಾಗದಲ್ಲಿ ಇನ್ನೂ ದೇವರು, ಧಾನ, ಧರ್ಮದ ಬಗ್ಗೆ ಅಪಾರ ನಂಬಿಕೆಯಿದೆ. ವಿವಿಧತೆಯಲ್ಲಿ ಏಕತೆ ಹೊಂದಿರುವ ಬಾಲೇಹೊಸೂರ ಗ್ರಾಮದ ಜನರು ಜಾತಿ-ಧರ್ಮ-ಪಕ್ಷ ಬೇಧ ಮರೆತು ಪರಸ್ಪರ ಅನ್ಯೋನ್ಯತೆ, ಶೃದ್ಧೆ, ಭಕ್ತಿಯಿಂದ ಸರ್ಕಾರದ ಅನುದಾನವಿಲ್ಲದೇ 80 ಲಕ್ಷ ರೂ ಖರ್ಚು ಮಾಡಿ ದೇವಸ್ಥಾನ ನಿರ್ಮಾಣ ಮಾಡಿರುವುದು ಸರಕಾರದ ಅನು(ಅಣು)ದಾನಕ್ಕಿಂತ ಭಕ್ತರ ಮಹಾದಾನ ಶ್ರೇಷ್ಠ ಎಂಬುದು ಸಾಬೀತುಪಡಿಸಿದ್ದೀರಿ. ಸಮಾಜ ನಮಗೇನು ಮಾಡಿದೆ ಎಂಬುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬ ಆತ್ಮಸಾಕ್ಷಾತ್ಕಾರ ಎಲ್ಲರದ್ದಾಗಬೇಕು ಎಂದರು.
ಆನಂದ ಗಡ್ಡದ್ದೇವರಮಠ ಮಾತನಾಡಿ, ಶ್ರೀ ದಿಂಗಾಲೇಶ್ವರ ಜಗದ್ಗುರುಗಳ ಶಕ್ತಿ-ಶ್ರೀರಕ್ಷೆ-ಆಶೀರ್ವಾದಿಂದ ಒಂದು ವರ್ಷದಲ್ಲಿ ಬಾಲೇಹೊಸೂರ ಸಂಪರ್ಕಿಸುವ ರಸ್ತೆಯನ್ನು ಪಕ್ಷಾತೀತವಾಗಿ ಅಭಿವೃದ್ಧಿಪಡಿಸುತ್ತೇವೆ ಎಂದರು. ದೇವಸ್ಥಾನ ಜೀರ್ಣೋದ್ಧಾರ ಕಮಿಟಿ ಅಧ್ಯಕ್ಷ ಗೋಪಾಲರಾವ್ ಕುಬೇರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ ಸಂದರ್ಭೋಚಿತವಾಗಿ ಮಾತನಾಡಿದರು.
ವೇದಿಕೆಯ ಮೇಲೆ ಗ್ರಾ.ಪಂ ಅಧ್ಯಕ್ಷೆ ಚನ್ನಮ್ಮ ಮೈಲಾರಿ, ಲಕ್ಷ್ಮಣಗೌಡ ಪಾಟೀಲ, ಸಣ್ಣೀರಪ್ಪ ಹಳ್ಳೆಪ್ಪನವರ, ಜಿ.ಆರ್. ಕೊಪ್ಪದ, ಎಂ.ಎಸ್. ದೊಡ್ಡಗೌಡ್ರ, ಚನ್ನಪ್ಪ ಜಗಲಿ, ಶಂಕ್ರಣ್ಣ ಬಾಳಿಕಾಯಿ, ಗಣೇಶ ರಾಹುತನಕಟ್ಟಿ, ರಾಮಣ್ಣ ಗಡದವರ, ಕೃಷ್ಣ ಕುಲಕರ್ಣಿ, ರಾಮಣ್ಣ ಹಾವನೂರ, ನಿಂಗಪ್ಪ ಮಡಿವಾಳರ, ಬಸವರೆಡ್ಡಿ ಹನಮರಡ್ಡಿ, ಫಕ್ಕೀರೇಶ ಮ್ಯಾಟಣ್ಣವರ, ರಾಮಪ್ಪ ಗಡದವರ, ಶಾಮಣ್ಣ ಕಡೇಮನಿ, ಭರತರಾಜ ಗುಡಗೇರಿ, ಶಿವಣ್ಣ ಕಬ್ಬೇರ, ಯಲ್ಲಪ್ಪ ಸೂರಣಗಿ, ಹೂವಪ್ಪ ದೀಪಾವಳಿ, ದೇವಣ್ಣ ಮತ್ತೂರ, ಬಸವರಾಜ ಗೂಳಣ್ಣವರ, ಗುರುಪಾದಪ್ಪ ಜಾಲವಾಡಗಿ, ಜುಂಜಪ್ಪ ಮುದಿಯಮ್ಮನವರ, ಕರಿಯಪ್ಪ ಸಾಂದ್ಲಿ, ಜಗದೀಶ ಜೋಗೇರ, ಮಾರುತಿ ಕೊಳಲ, ಸೋಮಯ್ಯ ಚನ್ನಾಪೂರಮಠ, ಲಿಂಬಯ್ಯಸ್ವಾಮಿ ಮಾದಾಪೂರಮಠ, ರಮೇಶ ಜೋಗೇರ ಅನೇಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಂ.ಎಸ್. ಸೋಮಕ್ಕನವರ, ಕಜ್ಜರಿಯ ದೇವಸ್ಥಾನದ ಶಿಲ್ಪಿ ಗಣೇಶ ರಾಹುತನಕಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಿದ್ಧಲಿಂಗಯ್ಯ ಪಶುಪತಿಮಠ, ಮಾರುತಿ ಸತ್ಯಮ್ಮನವರ, ಮೌನೇಶ ಹುದ್ದಣ್ಣವರ ನಿರೂಪಿಸಿದರು.
ಸಮಾಜಮುಖಿಯಾಗಿ ಬದುಕಿದಾಗ ಮಾತ್ರ ಬದುಕಿಗೊಂದು ಅರ್ಥ ಬರುತ್ತದೆ. ತೆರೆದ ಹೃದಯ ಆಂಜನೇಯ ಸ್ವಾಮಿ ನಂಬಿದ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತಾನೆ. ದೇವರು ಇದ್ದಾನೆ ಎಂಬುದಕ್ಕೆ ಆಂಜನೇಯ ಸ್ವಾಮಿ ಸೃಷ್ಟಿಸಿದ ಜಗತ್ತಿನ ಅತ್ಯದ್ಭುತ ಮತ್ತು ರಾಮೇಶ್ವರದ ಸೃಷ್ಟಿ ಇತಿಹಾಸವೇ ಸಾಕ್ಷಿಯಾಗಿದೆ. ಗ್ರಾಮದ ಜನರಲ್ಲಿನ ಧಾರ್ಮಿಕ ಭಕ್ತಿ, ಶೃದ್ಧೆಯಿಂದ ಗ್ರಾಮದಲ್ಲಿನ ಶ್ರೀ ದಿಂಗಾಲೇಶ್ವರ ಮಠ, ಅನೇಕ ದೇವಸ್ಥಾನಗಳು ಗ್ರಾಮದಲ್ಲಿನ ದೋಷ ಕಳೆದು ಶಾಂತಿ, ಸಮೃದ್ಧಿ, ಸಹಬಾಳ್ವೆ ನೆಲೆಸುವಂತಾಗಿರುವುದು ಸಂತಸ ತಂದಿದೆ.
– ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು.