HomeGadag Newsಪಿಎಸ್ಐ ಅವರಿಂದ ಜೀವ ಭಯ ಇದೆ: ನಮಗೆ ಸೂಕ್ತ ರಕ್ಷಣೆ ಬೇಕು

ಪಿಎಸ್ಐ ಅವರಿಂದ ಜೀವ ಭಯ ಇದೆ: ನಮಗೆ ಸೂಕ್ತ ರಕ್ಷಣೆ ಬೇಕು

For Dai;y Updates Join Our whatsapp Group

Spread the love

ಪಿಎಸ್ಐ ವರ್ಗಾವಣೆ ಮಾಡಿ…..

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಕಸ ಆರಿಸಿ ಜೀವನ ನಡೆಸುವ ಚಿಕ್ಕ ಸಮಾಜದ ನಮಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೇಳಲು ಅ.19ರಂದು ಲಕ್ಷ್ಮೇಶ್ವರ ಬಂದ್ ಕರೆ ನೀಡಿದ್ದು, ಇದಕ್ಕೆ ಸಂಘಟನೆಯವರು, ವ್ಯಾಪಾರಸ್ಥರು ಹಾಗೂ ಹಿರಿಯರು ಬೆಂಬಲ ನೀಡಬೇಕು ಎಂದು ಗೋಸಾವಿ ಸಮಾಜದ ಮುಖಂಡ ಬಾಳಪ್ಪ ಗೋಸಾವಿ ಮನವಿ ಮಾಡಿದರು.

ಅವರು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ವಿಜಯದಶಮಿ ಆಚರಣೆಯನ್ನು ಅನೇಕ ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ. ಅಂದು ಮುಸ್ಲಿಂ ಯುವಕರಿಂದ ನಮ್ಮ ಸಮಾಜದ ಯುವಕರಿಗೆ ಹಲ್ಲೆ ಆಗಿತ್ತು.

ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ಪಿಎಸ್‌ಐ ಈರಪ್ಪ ರಿತ್ತಿ ಅವರು ನಮ್ಮ ಸಮಾಜದ ಯುವಕರು ಹಾಗೂ ಹೆಣ್ಣು ಮಕ್ಕಳ ಮೇಲೆ ಲಾಠಿ ಪ್ರಯೋಗ ಮಾಡಿದ್ದಾರೆ. ಗಣೇಶ ಹಬ್ಬದ ಸಂದರ್ಭದಲ್ಲೂ ವಿನಾಕಾರಣ ನಮ್ಮ ಯುವಕರನ್ನು ಹೊಡೆದಿದ್ದಾರೆ. ನಮ್ಮ ಜನಾಂಗವನ್ನು ಗುರಿಯಾಗಿಸಿಕೊಂಡು ಪದೇ ಪದೇ ಹಲ್ಲೆ ನಡೆಸುತ್ತಿದ್ದಾರೆ.

ನಿತ್ಯ ಪಟ್ಟಣದಲ್ಲಿ ಕಸ ಆರಿಸಿ ಜೀವ ನಡೆಸುವ ನಮಗೆ ಪಿಎಸ್‌ಐ ಅವರಿಂದ ಜೀವ ಬೆದರಿಕೆ ಇದ್ದು, ನಮಗೆ ಸೂಕ್ತ ರಕ್ಷಣೆ ಬೇಕು ಮತ್ತು ಕೂಡಲೇ ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕು. ಪಿಎಸ್‌ಐ ಅವರು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿಯೇ ಇದ್ದರೆ ನಮ್ಮ ಸಮಾಜದ ಎಲ್ಲರೂ ಬೆಂಕಿ ಹಚ್ಚಿಕೊಂಡು ಸಾಯುತ್ತೇವೆ ಎಂದರು.

ಈ ವೇಳೆ ಗೋವಿಂದ ಗೋಸಾವಿ, ಸುರೇಶ ಗೋಸಾವಿ, ರಾಮು ಗೋಸಾವಿ, ರಾಜು ಗೋಸಾವಿ ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!