ಬೆಂಗಳೂರು: ಇಂದು ಬೆಳ್ಳಂ ಬೆಳಗ್ಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಗುರವಾದ ಜಿಟಿಜಿಟಿ ಮಳೆ ಆರಂಭವಾಗಿದೆ.
ನಗರದಲ್ಲಿ ಚಳಿ ಗಾಳಿ ಸಹ ಸೇರಿಕೊಂಡು ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ದೀಪಾವಳಿ ಹಬ್ಬದ ಸಂಭ್ರಮದ ಮಧ್ಯೆ ಈ ಮಳೆ ನಗರವನ್ನು ತಂಪಾಗಿಸಿದೆ. ಮತ್ತೊಂದೆಡೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆ ವಿಶೇಷವಾಗಿ 13 ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ತೀವ್ರ ಮಳೆಯ ಸಾಧ್ಯತೆ ಹೆಚ್ಚಾಗಿದೆ.
ಬೆಂಗಳೂರು ನಗರದಲ್ಲಿ ಈ ಮಳೆ ಮಲೆನಾಡಿನ ಹವಾಮಾನವನ್ನು ನೆನಪಿಸಿಸುವಂತೆ ತೊಂದರೆಯಿಲ್ಲದೆ ಸುರಿಯುತ್ತಿದೆ. ಚುಮುಚುಮು ಚಳಿ ಮತ್ತು ಹಗುರ ಮಳೆಯ ಸಂಯೋಜನೆಯಿಂದ ಊಟಿಯಂತೆ ಆರಾಮದಾಯಕ ವಾತಾವರಣ ಕಂಡುಬರುತ್ತಿದೆ. ಮುಂದಿನ ಮೂರು ದಿನಗಳವರೆಗೆ ಈ ಹವಾಮಾನ ಸ್ಥಿತಿ ಹೀಗೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.